ರಾಷ್ಟ್ರೀಯ

‘ಟೈಮ್ಸ್ ವರ್ಷದ ವ್ಯಕ್ತಿ’ ಸಮೀಕ್ಷೆಯಲ್ಲಿ ಟ್ರಂಪ್, ಒಬಾಮಾ, ಪುಟಿನ್’ರನ್ನು ಹಿಂದಿಕ್ಕಿದ ಮೋದಿ

Pinterest LinkedIn Tumblr

modi1

ನ್ಯೂಯಾರ್ಕ್: ಟೈಮ್ಸ್ ಮ್ಯಾಗಜೀನ್ 2016ನೇ ಸಾಲಿನ ವರ್ಷದ ವ್ಯಕ್ತಿ ಗೌರವ ಸಮೀಕ್ಷೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದಿದ್ದಾರೆ.

ಓದುಗರು ಹಾಕುವ ಮತಗಳನ್ನು ಪರಿಗಣಿಸಲಾಗುತ್ತಿದ್ದು, ಇಲ್ಲಿ ಮೋದಿಯವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್, ನಿರ್ಗಮಿತ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಕೂಡ ಸಮೀಕ್ಷೆಯಲ್ಲಿ ಹಿಂದಿಕ್ಕಿದ್ದಾರೆ.

ಸತತ ನಾಲ್ಕನೇ ವರ್ಷ ಟೈಮ್ಸ್ ಮ್ಯಾಗಜೀನ್ ನಡೆಸುವ ವರ್ಷದ ವ್ಯಕ್ತಿ ಸ್ಪರ್ಧೆಯಲ್ಲಿ ಪ್ರಧಾನಿ ಮೋದಿಯವರಿದ್ದಾರೆ. ಅಮೆರಿಕಾದಿಂದ ಪ್ರಕಟವಾಗುವ ಮ್ಯಾಗಜಿನ್ ಪ್ರತಿವರ್ಷ ಆನ್ ಲೈನ್ ಸಮೀಕ್ಷೆ ನಡೆಸುತ್ತದೆ. ಹಿಂದಿನ ವರ್ಷ ವಿಶ್ವದಲ್ಲಿ ಹೆಚ್ಚು ಸುದ್ದಿಯಲ್ಲಿದ್ದ, ಹೆಚ್ಚು ಪ್ರಭಾವ ಬೀರಿದ ವ್ಯಕ್ತಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗುತ್ತದೆ. ಕಳೆದ ವರ್ಷ ಜರ್ಮನ್ ಚಾನ್ಸೆಲರ್ ಅಂಜೆಲಾ ಮರ್ಕರ್ ಟೈಮ್ಸ್ ನ ವರ್ಷದ ವ್ಯಕ್ತಿಯಾಗಿದ್ದರು.

ಪ್ರತಿವರ್ಷ ಟೈಮ್ಸ್ ನ ಸಂಪಾದಕರು ವಿಶ್ವದ ನಾಯಕರು, ಅಧ್ಯಕ್ಷರು, ಪ್ರತಿಭಟನಾಕಾರರು, ಖಗೋಳ ವಿಜ್ಞಾನಿಗಳು, ಪಾಪ್ ಐಕಾನ್ ಗಳು, ಅಡ್ಡಿಪಡಿಸುವವರಲ್ಲಿ ವರ್ಷದ ವ್ಯಕ್ತಿ ಯಾರಾಗಬೇಕೆಂದು ನಿರ್ಧಾರ ತೆಗೆದುಕೊಳ್ಳುತ್ತಾರೆ. ಓದುಗರು ಕೂಡ ಮತ ಚಲಾಯಿಸುವಂತೆ ಕೇಳುತ್ತಾರೆ. ಓದುಗರ ಮತಗಳು ಬಹಳ ಮುಖ್ಯವಾಗಿರುತ್ತದೆ.

ಈ ವರ್ಷ ಓದುಗರು ಚಲಾಯಿಸಿದ ಆರಂಭದ ಮತಗಳಲ್ಲಿ ನರೇಂದ್ರ ಮೋದಿಯವರು ಶೇಕಡಾ 21ರಷ್ಟು ಮತಗಳಿಂದ ಮುಂದಿದ್ದಾರೆ. ಸ್ವಲ್ಪ ಸಮಯ ವಿಕಿಲೀಕ್ಸ್ ಸ್ಥಾಪಕ ಜುಲಿಯನ್ ಅಸ್ಸಂಜೆ ಆನ್ ಲೈನ್ ಸಮೀಕ್ಷೆಯಲ್ಲಿ ಡೊನಾಲ್ಡ್ ಟ್ರಂಪ್ ಗಿಂತ ಮುಂದಿದ್ದರು.

ಪ್ರಸ್ತುತ ಮೋದಿಯವರು ಶೇಕಡಾ 21 ಮತಗಳನ್ನು ಪಡೆದಿದ್ದರೆ, ವ್ಲಾಡಿಮಿರ್ ಪುಟಿನ್ ಶೇಕಡಾ 6, ಒಬಾಮಾ ಶೇಕಡಾ 7, ಟ್ರಂಪ್ ಶೇಕಡಾ 6 ಮತಗಳನ್ನು ಪಡೆದಿದ್ದಾರೆ. ಓದುಗರ ಸಮೀಕ್ಷೆ ಡಿಸೆಂಬರ್ 4ರಂದು ಮುಕ್ತಾಯವಾಗಲಿದ್ದು ಆ ಸಂದರ್ಭದಲ್ಲಿ ಯಾರು ಮುಂದಿರುತ್ತಾರೆ ಎಂಬುದರ ಮೇಲೆ ವರ್ಷದ ವ್ಯಕ್ತಿ ಯಾರಾಗುತ್ತಾರೆಂಬುದು ನಿರ್ಧಾರವಾಗಲಿದೆ. ಪ್ರಧಾನಿ ಮೋದಿಯವರು 2014ರಲ್ಲಿ ಟೈಮ್ಸ್ ಓದುಗರ ವರ್ಷದ ವ್ಯಕ್ತಿ ಪ್ರಶಸ್ತಿಗೆ ಭಾಜನರಾಗಿದ್ದರು.

Comments are closed.