ಕರ್ನಾಟಕ

ಎಲುಬಿಲ್ಲದ ಮಾಂಸ ” ಖ್ಯಾತಿಯ ನುಗ್ಗೆಯ ಮಹತ್ವದ ಗುಣಗಳು

Pinterest LinkedIn Tumblr

drum_stick_pic

ಮಂಗಳೂರು: ನುಗ್ಗೆಕಾಯಿ ಸುಮಾರು ಎರಡು ಸಾವಿರ ವರ್ಷದಷ್ಟು ಪುರಾತನಕಾಲದಲ್ಲಿಯೇ ಬಳಕೆಯಲ್ಲಿತ್ತು . ಇದನ್ನು ಹಳ್ಳಿಗಳಲ್ಲಿ ‘ಎಲುಬಿಲ್ಲದ ಮಾಂಸ’ ಎಂದೇ ಖ್ಯಾತಿ ಪಡೆದ ಕಾಯಿಯಾಗಿದೆ. ಋಗ್ವೇದದಲ್ಲಿ ನುಗ್ಗೆಯನ್ನು ಹಿತ್ತಲ ಗಿಡವಾಗಿ ಬೆಳೆಸುತ್ತಿದ್ದರೆಂದು ಉಲ್ಲೇಖವಿದೆ. ನುಗ್ಗೆಯ ಎಲೆ, ಹೂ, ಕಾಯಿ, ಬೇರು, ತೊಗಟೆ, ಬೀಜ ಆಹಾರ ಮತ್ತು ಔಷಧಿಯಲ್ಲಿ ಬಳಕೆಯಲ್ಲಿತ್ತಾದ್ದರಿಂದ ಪೂರ್ವಿಕರು ನುಗ್ಗೆಯನ್ನು ‘ಔಷಧಿಯ ಖನಿಜ’ ಎಂದು ಕರೆದಿದ್ದಾರೆ.

ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ರಂಜಕ ಮತ್ತು ಸುಣ್ಣದ ಅಂಶಗಳನ್ನೂ ಹೊಂದಿರುವ ನುಗ್ಗೆಕಾಯಿ ಏನೆಲ್ಲಾ ಔಷಧೀಯ ಗುಣಗಳನ್ನು ಹೊಂದಿದೆ ಎಂಬುದನ್ನು ತಿಳಿಯಿರಿ….

1. ಅಲ್ಸರ್ ನಿಂದ ಬಳಲುತ್ತಿರುವವರು ನುಗ್ಗೆ ಎಲೆಯನ್ನು ಅರೆದು ಮೊಸರಿನೊಂದಿಗೆ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
2. ನುಗ್ಗೆಯನ್ನು ಹಿತಮಿತವಾಗಿ ಬಳಸಿದಲ್ಲಿ ಹೃದಯಕ್ಕೆ ಬಲದಾಯಕ. ಅತಿಯಾಗಿ ಬಳಸಿದಲ್ಲಿ ಉರಿ, ಪಿತ್ತ ಹೆಚ್ಚುತ್ತದೆ.
3. ಹೊಟ್ಟೆನೋವು, ಚರ್ಮರೋಗ, ಕ್ಷಯ, ದಮ್ಮು, ಹೊಟ್ಟೆಯುಬ್ಬರ, ಅಜೀರ್ಣವುಳ್ಳವರಿಗೆ ಪಥ್ಯದ ಆಹಾರವಾಗಿದೆ ನುಗ್ಗೆ.
4. ಯಕೃತ್ತಿನ ತೊಂದರೆ ಇರುವವರಿಗೆ ನುಗ್ಗೆ ಉತ್ತಮ ಆಹಾರ.
5. ಸಂಧಿವಾತದಿಂದ ಬಳಲುವವರು ಬೇರಿನ ತೊಗಟೆಯನ್ನು ಜಜ್ಜಿ ನೋವಿರುವ ಜಾಗಕ್ಕೆ ಲೇಪಿಸಿಕೊಂಡಲ್ಲಿ ನೋವು ಕಡಿಮೆಯಾಗುತ್ತದೆ. ಅಲ್ಲದೇ ನುಗ್ಗೆ ಬೀಜದಿಂದ ತಯಾರಿಸಿದ ಎಣ್ಣೆಯೂ ನೋವು, ಊತ ಕಡಿಮೆ ಮಾಡುತ್ತದೆ.
6. ಮೂತ್ರ ಕಟ್ಟಿದ್ದಲ್ಲಿ ನುಗ್ಗೆಯ ಎಲೆ, ಹೂ, ಕಾಯಿ, ಬೀಜ ಎಲ್ಲವನ್ನೂ ಸೇರಿಸಿ ರಸ ತೆಗೆದು ಕುಡಿಯಬೇಕು. ಇದರಿಂದ ಮೂತ್ರಸ್ರಾವ ಸಲೀಸಾಗಿ ಆಗುತ್ತದೆ.
7. ನುಗ್ಗೆ ಬೇರನ್ನು ಕುಟ್ಟಿ ಪುಡಿ ಮಾಡಿ ಎಳ್ಳೆಣ್ಣೆಯಲ್ಲಿ ಬೆರೆಸಿ ಕಾಯಿಸಿ ತೈಲ ತಯಾರಿಸಿಟ್ಟುಕೊಂಡು ಚರ್ಮ ರೋಗಗಳಿಗೆ ಲೇಪಿಸಬೇಕು.
8. ರಕ್ತಹೀನತೆಯಿಂದ ಬಳಲುತ್ತಿರುವವರು 150 ಗ್ರಾಂ ಎಳೆಯ ಎಲೆಗಳನ್ನು ಮತ್ತು 100 ಗ್ರಾಂ ನುಗ್ಗೆ ಹೂಗಳನ್ನು ಸ್ವಲ್ಪ ಉಪ್ಪು ಬೆರೆಸಿದ ನೀರಿನಲ್ಲಿ ಕಾಯಿಸಿ ಕುಡಿಯಬೇಕು.

Comments are closed.