ಕರಾವಳಿ

ವಾಹನಗಳಿಗೆ ನಕಲಿ ನಂಬರ್ ಬಳಸಿ ಬ್ಯಾಂಕಿನಿಂದ ಸಾಲ ಪಡೆದು ವಂಚನೆ : ನಾಲ್ವರ ಬಂಧನ

Pinterest LinkedIn Tumblr

bank-cheeters_arest

ಮಂಗಳೂರು, ನವೆಂಬರ್. 29: ವಾಹನಗಳಿಗೆ ನಕಲಿ ನಂಬರ್ ಬಳಸಿ ಬ್ಯಾಂಕಿನಿಂದ ಸಾಲ ಪಡೆದು ವಂಚನೆ ಮಾಡುತ್ತಿದ್ದ ಬೃಹತ್ ವಂಚಕರ ಜಾಲವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಬರ್ಕೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನ್ ಚಂದ್ರಶೇಖರ್ ಅವರು ಮಾಹಿತಿ ನೀಡಿದ್ದಾರೆ.

police_commi_press_1

ಮಂಗಳವಾರ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಅವರು, ವಾಹನ ತಪಾಸಣೆ ವೇಳೆ ವಾಹನಗಳ ನಂಬರ್ ಬಳಸಿ ಬ್ಯಾಂಕಿನಿಂದ ಸಾಲ ಪಡೆದು ವಂಚನೆ ಮಾಡುತ್ತಿದ್ದ ಬೃಹತ್ ಜಾಲದ ಟ್ಯಾಂಪರಿಂಗ್ ಮಿಷಿನ್ ಪತ್ತೆಯಾಗಿದ್ದ್ದು, ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.

police_commi_press_2

ಬಂಧಿತ ಆರೋಪಿಗಳನ್ನು ಅನಿಲ್ ನೊರೆನ್ಹಾ, ಸುಧೀರ್, ನವೀನ್ ನೊರೆನ್ಹಾ, ವಲೇರಿಯನ್ ಡಿಸೋಜಾ ಎಂದು ಗುರುತಿಸಲಾಗಿದೆ.ಆರೋಪಿಗಳು ನಾಲ್ಕು ಲಾರಿಗಳಿಗೆ 93.94 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಬ್ಯಾಂಕ್‍ ಗಳಿಗೆ ನಕಲಿ ದಾಖಲೆ ಸೃಷ್ಠಿಸಿ ಸಾಲ ಪಡೆದು ವಂಚನೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಕಮಿಷನರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಕೆ.ಎಂ.ಶಾಂತರಾಜು, ಡಾ. ಸಂಜೀವ ಎಂ. ಪಾಟೀಲ್ ಹಾಗೂ ಸೆಂಟ್ರಲ್ ಉಪವಿಭಾಗದ ಎಸಿಪಿ ಉದಯ. ಎಂ ನಾಯಕ್ ಉಪಸ್ಥಿತರಿದ್ದರು.

Comments are closed.