ಮುಂಬೈ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪಿತೃ ವಿಯೋಗ

Pinterest LinkedIn Tumblr

shilp_father_surendrashetty

ಮುಂಬಯಿ, ಅ. 11: ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ತಂದೆ ಸುರೇಂದ್ರ ಎಸ್.ಶೆಟ್ಟಿ (75) ಅವರು ಇಂದಿಲ್ಲಿ ಅಂಧೇರಿ ಪಶ್ಚಿಮದ ವರ್ಸೋವಾದ ಸ್ವನಿವಾಸದಲ್ಲಿ ಹೃದಯಘಾತದಿಂದ ನಿಧನ ಹೊಂದಿದರು.

ಮೃತರು ದಕ್ಷಿಣ ಕನ್ನಡದ ಮಂಗಳೂರಿನ ಕೌಡೂರುನವರಾಗಿದ್ದು, ಪತ್ನಿ ಸುನಂದಾ ಶೆಟ್ಟಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಶಮೀತಾ ಶೆಟ್ಟಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ನಾಳೆ ಬುಧವಾರ  ಬೆಳಿಗ್ಗೆ 9.30 ಗಂಟೆಗೆ ವಿಲೇಪಾರ್ಲೆ ಪಶ್ಚಿಮದಲ್ಲಿ ನೇರವೇರಲಿದೆ.

ಕೃಪೆ :ರೋನ್ಸ್ ಬಂಟ್ವಾಳ್

Comments are closed.