ಮನೋರಂಜನೆ

ತಾಳ್ಮೆ ಕಳೆದುಕೊಂಡ್ರು ಐಶ್ವರ್ಯ ರೈ.. ಸಲ್ಮಾನ್ ಬಗ್ಗೆ ಕೇಳಲಾದ ಪ್ರಶ್ನೆಗೆ ಎದ್ದು ಹೊರನಡೆದ ಐಶ್

Pinterest LinkedIn Tumblr

ishಮುಂಬೈ: ಐಶ್ವರ್ಯ ರೈ- ಅಭಿಷೇಕ್ ಮಧ್ಯೆ ಮನಸ್ತಾಪ ಇದೆ ಎಂಬ ವದಂತಿ ಬೆನ್ನಲ್ಲೇ, ಇದೀಗ ಐಶ್ವರ್ಯ ರೈ ತಾಳ್ಮೆ ಕಳೆದುಕೊಂಡಿದ್ದು ಕಂಡು ಬಂದಿದೆ. ಹಳೆಯ ವಿಷಯಗಳನ್ನು ಮತ್ತೆ ಪ್ರಸ್ತಾಪಿಸಿರುವ ಬಗ್ಗೆ ಐಶ್ವರ್ಯಗೆ ನೋವಾಗಿದೆ. ಅದಕ್ಕಾಗಿ ಅವರು ಸಂದರ್ಶನದ ವೇಳೆ ತಾಳ್ಮೆ ಕಳೆದುಕೊಂಡು ಹೊರ ನಡೆದಿದ್ದಾರೆ.

ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ರೈ ಮಧ್ಯೆ ಬ್ರೇಕ್ ಆಗಿದ್ದು ಎಲ್ಲರಿಗೂ ಗೊತ್ತು. ಇವರಿಬ್ಬರು ಲವರ್ಸ್ ಅಂತ ಹೇಳಲಾಗ್ತಿತ್ತು. ಆದ್ರೆ ಅಭಿಷೇಕ್ ಬಚ್ಚನ್‌ರನ್ನು ವಿವಾಹವಾಗಿ ಐಶ್ ಸ್ಲೆಟ್ ಆಗಿದ್ದು ಎಲ್ಲರಿಗೂ ಗೊತ್ತು.

ಅದಾದ ಬಳಿಕ ಸಲ್ಮಾನ್ ಹಿಟ್ ಸಿನಿಮಾಗಳನ್ನು ನೀಡುತ್ತಲೇ ಇದ್ದಾರೆ. ಆದ್ರೆ ವಿಷ್ಯ ಅಂದಲ್ಲ , ಹಳೆಯ ವಿಷಯಗಳನ್ನು ಮತ್ತೆ ಪ್ರಸ್ತಾಪಿಸಿರುವ ಬಗ್ಗೆ ಐಶ್ವರ್ಯಗೆ ನೋವಾಗಿದೆಯಂತೆ.

‘ಸರಬ್ಜಿತ್’ ಚಿತ್ರದ ಸಂದರ್ಶನದಲ್ಲಿ ಖಾಸಗಿ ಮಾಧ್ಯಮ ಸಂಸ್ಥೆಗೆ ಐಶ್ವರ್ಯ ರೈ ಬಂದಿದ್ದರು. ಈ ವೇಳೆ ಭವಿಷ್ಯದಲ್ಲಿ ಮತ್ತೆ ಸಲ್ಮಾನ್ ಜತೆಗೆ ಚಿತ್ರ ಮಾಡಲು ಬಯಸುತ್ತೀರಾ ? ಎಂದು ಕೇಳಲಾದ ಪ್ರಶ್ನೆಗೆ ಐಶ್‌ ಎದ್ದು ನಿಂತು ಸಂದರ್ಶನ ನಿಲ್ಲಿಸುವಂತೆ ಸೂಚಿಸಿದ್ರಂತೆ. ಬಳಿಕ ಸಂದರ್ಶನದಿಂದ ಐಶ್ ಹೊರನಡೆದಿದ್ದಾರೆ. ಈ ವೇಳೆ ಸಂದರ್ಶನದ ಕೆಲ ಫೂಟೇಜ್‌ಗಳನ್ನು ತೆಗೆದುಕೊಂಡು ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.

ಇನ್ನೂ ಜತೆಗಿದ್ದ ನಿರ್ಮಾಪಕ ಜಾಕಿ ಭಾಗನಾನಿ ಐಶ್ವರ್ಯರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಐಶ್ ಮಾತ್ರ ತಮ್ಮ ತಾಳ್ಮೆ ಕಳೆದುಕೊಂಡಿದ್ದರು ಎಂದು ಹೇಳಲಾಗ್ತಿದೆ.

Comments are closed.