ಅಂತರಾಷ್ಟ್ರೀಯ

ಐಸಿಸ್ ಜತೆ ನಂಟು, ಪಾಕ್​ನ 5 ಅಧಿಕಾರಿಗಳಿಗೆ ಜೀವಾವಧಿ ಶಿಕ್ಷೆ

Pinterest LinkedIn Tumblr

pak-death-sentence

ಕರಾಚಿ: ಪಾಕಿಸ್ತಾನದ ಐವರು ನೌಕಾಪಡೆ ಅಧಿಕಾರಿಗಳು ನಿಷೇಧಿತ ಐಸಿಸ್ ಉಗ್ರ ಸಂಘಟನೆಯೊಡನೆ ಸಂಬಂಧ ಹೊಂದಿದ್ದ ಆರೋಪದ ಮೇಲೆ ಪಾಕಿಸ್ತಾನ ಕೋರ್ಟ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸದೆ.

ಪಾಕ್ನ ರಹಸ್ಯ ಸೇನಾ ಕಾರ್ಯಾಚರಣೆಯಲ್ಲಿ ಉಗ್ರರು ಪಾಕಿಸ್ತಾನದ ಯುದ್ದ ವಿಮಾನವನ್ನು ಅಪಹರಿಸಿ ಅಮೆರಿಕದ ನೌಕಾಪಡೆಯ ಇಂಧನ ಪೂರೈಕೆ ಹಡಗುಗಳ ಮೇಲೆ ದಾಳಿ ನಡೆಸುವ ಉದ್ದೇಶ ಹೊಂದಿದ್ದರು ಎಂದು ಪಾಕ್ ಮಾಧ್ಯಮವೊಂದು ವರದಿ ಮಾಡಿದೆ. ಸಬ್ ಲೆಫ್ಟಿನೆಂಟ್ ಹಮ್ಮದ್ ಅಹ್ಮದ್ ಮತ್ತು ನಾಲ್ವರು ನೌಕಾಪಡೆ ಅಧಿಕಾರಿಗಳು 2014 ರಲ್ಲಿ ನಡೆದ ಕರಾಚಿ ನೌಕಾನೆಲೆ ಮೇಲೆ ದಾಳಿಗೆ ನಂಟು ಹೊಂದಿರುವ ಆರೋಪದ ಮೇಲೆ ಬಂಧಿಸಲಾಗಿತ್ತು.

ಈ ದಾಳಿಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿ 4 ಜನರನ್ನು ಸೆರೆಹಿಡಿದಿದ್ದರು. ನಿವೃತ್ತ ಸೇನಾ ಅಧಿಕಾರಿಯಾದ ಹಮ್ಮದ್ ತಂದೆ ಸಯೀದ್ ಅಡ್ವೋಕೇಟ್ ಜನರಲ್ಗೆ ಪತ್ರ ಬರೆದು ತನ್ನ ಮಗನ ಪರವಾಗಿ ವಕೀಲರ ನೇಮಕಕ್ಕೆ ಅವಕಾಶ ನೀಡಬೇಕೆಂದು ಕೋರಿದ್ದರು. ನಂತರ ಎಲ್ಲಾ ಆರೋಪಿಗಳನ್ನು ಕರಾಚಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿತ್ತು, ಅಲ್ಲಿಗೆ ಭೇಟಿ ನೀಡಿದಾಗ ನೌಕಾಪಡೆ ನ್ಯಾಯಾಲಯ ತಮಗೆಲ್ಲಾ ಏಪ್ರಿಲ್ 14 ರಂದು ಜೀವಾವಧಿ ಶಿಕ್ಷೆಯಾಗಿರುವುದಾಗಿ ಹಮ್ಮದ್ ಮತ್ತು ಸಹಚರರು ತಿಳಿಸಿದರು ಎಂದು ಸಯೀದ್ ಹೇಳಿದ್ದಾರೆ.

ಕುಟುಂಬಕ್ಕೆ ಯಾವುದೇ ಸೂಚನೆ ನೀಡದೆ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಖಂಡಿಸಿ ಉಚ್ಛ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವುದಾಗಿ ಸಯೀದ್ ತಿಳಿಸಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಲು ಪಾಕಿಸ್ತಾನ ನೌಕಾಪಡೆ ನ್ಯಾಯಾಲಯ ನಿರಾಕರಿಸಿದೆ.

Comments are closed.