ಮುಂಬೈ

ಜಿಂಬಾಬ್ವೆ, ವೆಸ್ಟ್‌ಇಂಡೀಸ್‌ ಸರಣಿಗೆ ತಂಡ ಪ್ರಕಟ

Pinterest LinkedIn Tumblr

doniiiiiiiಮುಂಬೈ (ಪಿಟಿಐ): ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೆ ನಾಯಕ ಎಂ.ಎಸ್. ದೋನಿ ಅವರೇ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
16 ಸದಸ್ಯರ ತಂಡವನ್ನು ಪ್ರಕಟಿಸಲಾಗಿದ್ದು ಉಪ ನಾಯಕ ವಿರಾಟ್ ಕೊಹ್ಲಿಯವರಿಗೆ ವಿಶ್ರಾಂತಿ ನೀಡಲಾಗಿದೆ. ಜೂನ್‌ 11 ರಿಂದ ಪಂದ್ಯಗಳು ಆರಂಭವಾಗಲಿವೆ. ಜಿಂಬಾಬ್ವೆ ವಿರುದ್ಧ ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳು ನಡೆಯಲಿವೆ.
ವೆಸ್ಟ್‌ಇಂಡೀಸ್‌ ವಿರುದ್ಧ ನಡೆಯಲಿರುವ 4 ಟೆಸ್ಟ್ ಸರಣಿಗೆ 17 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದೆ. ಟೆಸ್ಟ್‌ ಪಂದ್ಯಗಳಿಗೆ ವಿರಾಟ್ ಕೊಹ್ಲಿ ನಾಯಕರಾಗಲಿದ್ದಾರೆ.
ಜಿಂಬಾಬ್ವೆ ಸರಣಿ:  ಎಂ.ಎಸ್.ದೋನಿ(ನಾಯಕ), ಕೆ.ಎಲ್.ರಾಹುಲ್, ಫೈಜ್ ಫಜಲ್, ಮನೀಶ್ ಪಾಂಡೆ, ಕರುಣ್ ನಾಯರ್, ಅಂಬಾಟಿ ರಾಯುಡು, ರಿಷಿ ಧವನ್, ಅಕ್ಷರ್‌ ಪಟೇಲ್, ಜಯಂತ್ ಯಾದವ್, ಧವಳ್‌ ಕುಲಕರ್ಣಿ, ಬೂಮ್ರಾ, ಬರೀಂದರ್, ಮಂದೀಪ್ ಸಿಂಗ್, ಕೇದಾರ್ ಜಾಧವ್, ಜಾದವ್ ಉನದ್ ಕಾಟ್, ಯಜುವೇಂದ್ರ ಚಹಲ್ .
ವೆಸ್ಟ್ ಇಂಡೀಸ್ ಟೆಸ್ಟ್‌ ಸರಣಿ:  ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಕೆ,ಎಲ್.ರಾಹುಲ್, ಚೇತೇಶ್ವರ ಪೂಜಾರ್, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ವೃದ್ದಿಮಾನ್ ಸಹಾ, ಆರ್.ಅಶ್ವಿನ್, ರವೀಂದ್ರ ಜಡೇಜಾ, ಇಶಾಂತ್ ಶರ್ಮ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಶಾರ್ದುಲ್ ಠಾಕೂರ್, ಸ್ಟುವರ್ಟ್ ಬಿನ್ನಿ.

Comments are closed.