ಅಂತರಾಷ್ಟ್ರೀಯ

ಇರಾನ್‌: 12 ಒಪ್ಪಂದಗಳಿಗೆ ಮೋದಿ ಸಹಿ

Pinterest LinkedIn Tumblr

ghghghghಟೆಹರಾನ್‌ (ಪಿಟಿಐ): ಇರಾನ್ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಮಾತುಕತೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನರೇಂದ್ರ ಮೋದಿ ಅವರು, ಭಾರತ ಮತ್ತು ಇರಾನ್‌ ನಡುವಿನ ಸಂಬಂಧ ಪುರಾತನವಾದದ್ದು, ಎರಡು ದೇಶಗಳು ಮಿತ್ರ ರಾಷ್ಟ್ರಗಳಾಗಿದ್ದು ಸಾಂಸ್ಕೃತಿಕ ಮತ್ತು ವಾಣಿಜ್ಯಿಕವಾಗಿ ಸಂಬಂಧವನ್ನು ಹೊಂದಿವೆ ಎಂದರು.
ಚಬಾಹರ್‌ ಬಂದರು ನಿರ್ಮಾಣ ಸೇರಿದಂತೆ ಪ್ರಮುಖ 12 ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು ಮುಂದಿನ ದಿನಗಳಲ್ಲಿ ಉಭಯ ದೇಶಗಳ ನಡುವಿನ ಬಾಂಧವ್ಯ ಮತ್ತಷ್ಟು ವೃದ್ಧಿಯಾಗಲಿದೆ ಎಂದು ಮೋದಿ ತಿಳಿಸಿದರು.
ವಿಜ್ಞಾನ-ತಂತ್ರಜ್ಞಾನ, ಶಿಕ್ಷಣ, ಕಲೆ, ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವಿನ ಸಹಕಾರ ವಿನಿಮಯಗೊಳ್ಳಲಿದೆ ಎಂದು ಮೋದಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಇರಾನ್‌ಗೆ 15 ಕೋಟಿ ಡಾಲರ್ ಸಾಲವನ್ನು ಘೋಷಿಸಿದ್ದಾರೆ.

Comments are closed.