ಮನೋರಂಜನೆ

ಕ್ಯಾಮೆರಾ ಮುಂದೆ ಸುಧಾರಾಣಿ ಪುತ್ರಿ ನಿಧಿ

Pinterest LinkedIn Tumblr

Sudharaniನಟಿ ಸುಧಾರಾಣಿ ತಮ್ಮ 13 ನೇ ವಯಸ್ಸಿಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟವರು. ಅಂದಿನಿಂದ ಇಂದಿನವರೆಗೂ ಸುಧಾರಾಣಿ ಅವರ ಛಾಪು ಇದ್ದೇ ಇದೆ. ಇಂದಿಗೂ ಕೂಡ ಸುಧಾರಾಣಿ ಎಲ್ಲರ ಮೆಚ್ಚಿನ ನಾಯಕಿ ಅನ್ನುವುದರಲ್ಲಿ ಎರಡು ಮಾತಿಲ್ಲ. ಈಗ ಅವರ ಮಗಳು ನಿಧಿ ಕೂಡ ಬಣ್ಣ ಹಚ್ಚಿಕೊಂಡು ಕ್ಯಾಮೆರಾ ಮುಂದೆ ನಿಂತಿದ್ದಾರೆ ಎಂಬುದೇ ವಿಶೇಷ. ಹೌದು, ಸುಧಾರಾಣಿ ಪುತ್ರಿ ನಿಧಿ ಕ್ಯಾಮೆರಾ ಮುಂದೆ ನಿಂತಿರುವುದೇನೋ ನಿಜ, ಆದರೆ, ಅವರು ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂಬುದು ಕೂಡ ಅಷ್ಟೇ ಸತ್ಯ. ನಿಧಿ ಜಾಹಿರಾತುವೊಂದರಲ್ಲಿ ಅಭಿನಯಿಸಿದ್ದಾರೆ.

ಮೈಸೂರು ಟಾರ್ಪಲಿನ್ಸ್‌ಗೆ ಸುಧಾರಾಣಿ ಪುತ್ರಿ ನಿಧಿ ರೂಪದರ್ಶಿಯಾಗಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ನಿಧಿ ಅವರು ಆ ಜಾಹಿರಾತಿನಲ್ಲಿ ನಟಿಸುವ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟಂತಾಗಿದೆ. ಆದರೆ, ನಿಧಿ ಸಿನಿಮಾಗೆ ಎಂಟ್ರಿಯಾಗುವುದಿಲ್ಲವೇ ಎಂಬ ಪ್ರಶ್ನೆ ಎದುರಾದರೂ, ಸದ್ಯಕ್ಕೆ ನಿಧಿ ಓದಿನ ವಿಷಯ ಮುಂದಿದೆ. ಡೆಲ್ಲಿ ಪಬ್ಲಿಕ್‌ ಸ್ಕೂಲ್‌ನಲ್ಲಿ ಹತ್ತನೇ ತರಗತಿ ಓದುತ್ತಿರುವ ನಿಧಿಗೆ ಮೊದಲು ಓದುವಾಸೆ. ಆ ನಂತರ ಸಿನಿಮಾ ಬಗ್ಗೆ
ಯೋಚನೆಯಂತೆ.

ನಿಧಿಯನ್ನು ಸಿನಿಮಾಗೆ ತರುವುದು ಅವರ ಫ್ಯಾಮಿಲಿಗೆ ದೊಡ್ಡ ವಿಷಯವೇನಲ್ಲ. ಸುಧಾರಾಣಿ ಅವರು ಮನಸ್ಸು ಮಾಡಿದರೆ, ನಿಧಿಗೆ ಒಳ್ಳೆಯ ಚಿತ್ರಗಳಲ್ಲೇ ನಟಿಸುವ ಅವಕಾಶಗಳು ಹೇರಳವಾಗಿ ಸಿಗುತ್ತವೆ. ಆದರೆ, ಸುಧಾರಾಣಿ ಅವರಿಗೆ ಮಗಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ. ಮೊದಲು ಓದು, ಆ ನಂತರ ಮಿಕ್ಕಿದ್ದು ಎಂಬ ಉತ್ತರ ಅವರದು.

ಹಾಗೆ ಹೇಳುವುದಾದರೆ, ನಿಧಿ ಹಿಂದೆಯೇ ಒಂದು ಚಿತ್ರದಲ್ಲಿ ಬಣ್ಣ ಹಚ್ಚಿ, ಅಮ್ಮನ ಜತೆ ನಟಿಸಿದ್ದರು. ಆದರೆ, ಅದೇಕೋ ಚಿತ್ರ ಪೂರ್ಣಗೊಳ್ಳಲಿಲ್ಲ. ಒಂದು ವೇಳೆ ಅದು ಬಿಡುಗಡೆಯಾಗಿದ್ದರೆ, ನಿಧಿ 7 ನೇ ವಯಸ್ಸಿನಲ್ಲೇ ಸಿನಿಮಾ ರಂಗಕ್ಕೆ ಎಂಟ್ರಿಕೊಡುತ್ತಿದ್ದರು. ಅದೇನೆ ಇರಲಿ, ಎಲ್ಲವನ್ನೂ ಕಾಲ ನಿರ್ಣಯಿಸುತ್ತದೆ. ಮುಂದೊಂದು ದಿನ, ನಿಧಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರೂ ಅಚ್ಚರಿಯಿಲ್ಲ. ಯಾವುದಕ್ಕೂ ಕಾದು ನೋಡಬೇಕಷ್ಟೇ.
-ಉದಯವಾಣಿ

Comments are closed.