ಮುಂಬೈ

ಮಹಾರಾಷ್ಟ್ರ ಗೋವಧೆ ನಿಷೇಧ ಸಿಂಧು, ದಾಸ್ತಾನು, ಭಕ್ಷಣೆ ತಪ್ಪಲ್ಲ

Pinterest LinkedIn Tumblr

06-bombay-high-court-webಮುಂಬೈ: ಮಹಾರಾಷ್ಟ್ರದಲ್ಲಿ ಗೋವಧೆ ನಿಷೇಧವನ್ನು ಎತ್ತಿ ಹಿಡಿದಿರುವ ಬಾಂಬೆ ಹೈಕೋರ್ಟ್, ಮಹಾರಾಷ್ಟ್ರದ ಹೊರಗಿನಿಂದ ಗೋಮಾಂಸವನ್ನು ತಂದು ದಾಸ್ತಾನು ಇಡುವುದು ಮತ್ತು ತಿನ್ನುವುದು ಅಕ್ರಮವಲ್ಲ ಎಂದು ತೀರ್ಪು ನೀಡಿದೆ.

ಮಹಾರಾಷ್ಟ್ರ ಪ್ರಾಣಿ ಸಂರಕ್ಷಣಾ ಕಾಯ್ದೆ 1976ರ ಕಾಯ್ದೆಯಲ್ಲಿ ಗೋಮಾಂಸ ಆಮದು ಮತ್ತು ಗೋಮಾಂಸ ದಾಸ್ತಾನನ್ನು ಕ್ರಿಮಿನಲ್ ಅಪರಾಧ ಎಂಬುದಾಗಿ ಹೇಳಿರುವ ಎರಡು ವಿಧಿಗಳನ್ನು ಕೋರ್ಟ್ ರದ್ದು ಪಡಿಸಿತು.

ಬೇರೆ ರಾಜ್ಯಗಳಿಂದ ಗೋಮಾಂಸ ಆಮದು ಮತ್ತು ದಾಸ್ತಾನು ನಿಷೇಧಿಸುವ ಕಾಯ್ದೆಯ 5 (ಡಿ) ವಿಧಿಯು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಒದಗಿಸಲಾಗಿರುವ ಆಹಾರದ ಹಕ್ಕು ಮತ್ತು ಆಯ್ಕೆ ಹಾಗೂ ಖಾಸಗಿತನದ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಮೂರ್ತಿ ಅಭಯ್ ಓಕಾ ಮತ್ತು ನ್ಯಾಯಮೂರ್ತಿ ಎಸ್ಸಿ ಗುಪ್ತ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಹೇಳಿತು. ಗೋಮಾಂಸ ದಾಸ್ತಾನು ಅಪರಾಧಕ್ಕೆ ಒಂದು ವರ್ಷದವರೆಗೆ ಸೆರೆಮನೆ ಮತ್ತು 2000 ರೂ.ಗಳವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಿದ್ದ ಕಾಯ್ದೆಯ 9(ಬಿ) ವಿಧಿಯನ್ನು ಕೂಡಾ ನ್ಯಾಯಾಲಯ ಸಂವಿಧಾನಬಾಹಿರ ಎಂದು ಹೇಳಿತು. ಕಾಯ್ದೆಗೆ 1995ರಲ್ಲಿ ಅಳವಡಿಸಲಾದ ಮತ್ತು 2015ರ ಮಾರ್ಚ್ನಲ್ಲಿ 20 ವರ್ಷಗಳ ಬಳಿಕ ಜಾರಿಗೆ ತರಲಾದ ತಿದ್ದು ಪಡಿಗಳ ವಿರುದ್ಧ ಹಲವಾರು ಅರ್ಜಿಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದವು.

Write A Comment