ರಾಷ್ಟ್ರೀಯ

ಅತ್ಯಾಚಾರ ಆರೋಪಿಗೆ 27 ವರ್ಷದ ನಂತರ ಜೈಲುಶಿಕ್ಷೆ

Pinterest LinkedIn Tumblr

1-Court-webಅಮೃತಸರ: ಈ ಮೇಲ್ ಮೂಲಕ ದಾಖಲಾದ ದೂರೊಂದು ಅತ್ಯಾಚಾರ ಆರೋಪಿಗೆ 27 ವರ್ಷದ ನಂತರ 7 ವರ್ಷ ಜೈಲುಶಿಕ್ಷೆ ಜಾರಿಯಾಗಲು ಕಾರಣವಾಗಿದೆ.

ಘಟನೆ ಹಿನ್ನೆಲೆ :

ದೂರುದಾರ 36 ವರ್ಷದ ಮಹಿಳೆ ಭಾರತದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭ ತನ್ನ ತಾಯಿಯ ಸೂಚನೆಯಂತೆ ಮಾವ ಸುಖವಂತ್ಸಿಂಗ್ ಸಿದ್ದು ಮನೆಯಲ್ಲಿ ವಾಸವಿದ್ದರು. ಈಕೆ 9 ವರ್ಷದವರಿದ್ದಾಗಲೇ ಮಾವನಿಂದ ಹಲವುಬಾರಿ ಅತ್ಯಾಚಾರಕ್ಕೆ ಒಳಗಾಗಿದ್ದರು. ಭಯಕ್ಕೆ ಒಳಗಾಗಿ ಈ ಸಂಗತಿಯನ್ನು ಯಾರಲ್ಲೂ ಆಕೆ ಬಹಿರಂಗಗೊಳಿಸಿರಲಿಲ್ಲ.

ಅಮೆರಿಕೆಗೆ ತೆರಳಿ ವೈದ್ಯ ಪದವಿಗಳಿಸಿದ ಆಕೆ 2014ರಲ್ಲಿ ತನ್ನ ತಾಯಿಯೊಂದಿಗೆ ಭಾರತಕ್ಕೆ ಮರಳಿ ಪಂಜಾಬ್ ಪೊಲೀಸ್ ಮಹಾನಿರೀಕ್ಷಕರಿಗೆ ಅಧಿಕೃತ ದಾಖಲೆಗಳೊಂದಿಗೆ ದೂರು ಸಲ್ಲಿಸಿ, ನ್ಯಾಯಪೀಠದ ಮೊರೆ ಹೋಗಿದ್ದರು.

ಅಂತಿಮ ತೀರ್ಪು ಬರುವ ಮುನ್ನವೇ ಜಾಮೀನಿನ ಮೇಲೆ ಆರೋಪಿ ಬಿಡುಗಡೆಗೊಂಡಿದ್ದ.ಈ ಬಗ್ಗೆ ಕೆಲ ದಿನಗಳ ಹಿಂದೆ ಪೊಲೀಸ್ ಮಹಾನಿರೀಕ್ಷಕರಿಗೆ ಅಮೆರಿಕದಿಂದ ಮತ್ತೊಮ್ಮೆ ಈ ಮೇಲ್ ಸಂದೇಶ ಕಳಿಸಿ, ನ್ಯಾಯ ದೊರಕಿಸಿಕೊಡುವಂತೆ ವಿನಂತಿಸಿದ್ದರು.

ರಾಣಿಬಾಗ್ ಪ್ರದೇಶದಲ್ಲಿ ವಾಸವಿರುವ (60 ವರ್ಷದ )ಆರೋಪಿಯನ್ನು ಪೊಲೀಸರು ಬಂಧಿಸಿ, ನ್ಯಾಯಪೀಠದೆದುರು ಹಾಜರು ಪಡಿಸಿದಾಗ, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಹರ್ಪ್ರೀತ್ಕೌರ್ 7 ವರ್ಷ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

Write A Comment