ಮುಂಬೈ

ಮೇ 1ರಂದು ಪುಣೆಯಲ್ಲಿ ಐಪಿಎಲ್ ಪಂದ್ಯಕ್ಕೆ ಅನುಮತಿ

Pinterest LinkedIn Tumblr

iplಮುಂಬೈ(ಪಿಟಿಐ): ಬರಗಾಲದ ಕಾರಣಕ್ಕೆ ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ಮಹಾರಾಷ್ಟ್ರದಿಂದ ಆಚೆ ಸ್ಥಳಾಂತರಿಸಲು ಸೂಚಿಸಿದ್ದ ಬಾಂಬೆ ಹೈಕೋರ್ಟ್‌, ಮೇ 1ರಂದು ಪುಣೆಯಲ್ಲಿ ಒಂದು ಪಂದ್ಯ ನಡೆಸಲು ಬುಧವಾರ ಅನುಮತಿ ನೀಡಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ) ‍ಪ್ರಧಾನ ವ್ಯವಸ್ಥಾಪಕ(ಕ್ರೀಡಾ ಅಭಿವೃದ್ಧಿ) ರತ್ನಕಾರ್ ಶೆಟ್ಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿ.ಎಂ.ಕಾನಡೆ ಹಾಗೂ ಎಂ.ಎಸ್.ಕಾರ್ಣಿಕ್ ಅವರಿದ್ಧ ವಿಭಾಗೀಯ ಪೀಠ, ಪುಣೆ ಹಾಗೂ ಮುಂಬೈ ನಡುವೆ ಪುಣೆಯಲ್ಲಿ ಪಂದ್ಯ ನಡೆಸಲು ಅನುಮತಿ ನೀಡಿತು.
ತೀವ್ರ ಬರ ಎದುರಿಸುತ್ತಿರುವ ಕಾರಣಕ್ಕಾಗಿ ಏಪ್ರಿಲ್ 30ರ ಬಳಿಕ ಎಲ್ಲಾ ಐಪಿಎಲ್‌ ಪಂದ್ಯಗಳನ್ನು ಮಹಾರಾಷ್ಟ್ರದಿಂದ ಹೊರಗೆ ಆಯೋಜಿಸುವಂತೆ ಬಿಸಿಸಿಐಗೆ ಈ ಹಿಂದೆ ಹೈಕೋರ್ಟ್‌ ಸೂಚಿಸಿತ್ತು. ಇದರಿಂದ ಒಟ್ಟು 13 ಪಂದ್ಯಗಳು ಸ್ಥಳಾಂತರಿಸ ಬೇಕಿತ್ತು.
ಬಿಸಿಸಿಐ ವಾದ ಏನು?: ರೈಸಿಂಗ್ ಪುಣೆ ಸೂಪರ್‌ ಜೆಂಟ್ಸ್‌ ತಂಡವು ಏಪ್ರಿಲ್ 29ರಂದು ಗುಜರಾತ್ ಲಯನ್ಸ್ ವಿರುದ್ಧ ಪುಣೆಯಲ್ಲಿ ಪೈಪೋಟಿ ನಡೆಸಲಿದೆ.
ಬಳಿಕ ಮೇ 1ರಂದು ಮುಂಬೈ ವಿರುದ್ಧ ಸೆಣಸಬೇಕಿದೆ. ಆದ್ದರಿಂದ ಒಂದು ದಿನದಲ್ಲಿ ಪಂದ್ಯವನ್ನು ಮಹಾರಾಷ್ಟ್ರದಿಂದ ಹೊರಗೆ ಸ್ಥಳಾಂತರಿಸುವುದು ಬಿಸಿಸಿಐಗೆ ‘ಪ್ರಯೋಗಿಕವಾಗಿ ಕಷ್ಟ’. ಪಂದ್ಯವು ಮುಗಿಯುವುದು ಮಧ್ಯರಾತ್ರಿ ಆಗುತ್ತದೆ. ಬೇರೆ ಕಡೆ ಆಯೋಜಿಸಿದರೆ, ಮರುದಿನ ಮಧ್ಯಾಹ್ನವೇ ಪ್ರಯಾಣಿಸಬೇಕಾಗುತ್ತದೆ ಎಂದು ಅರ್ಜಿಯಲ್ಲಿ ಬಿಸಿಸಿಐ ವಾದ ಮಂಡಿಸಿತ್ತು.
ಬಿಸಿಸಿಐ ವಾದವನ್ನು ಆಲಿಸಿದ ನ್ಯಾಯಾಲಯ, ಇದೊಂದು ಪಂದ್ಯಕ್ಕೆ ಅವಕಾಶ ನೀಡಿತು.

Write A Comment