ರಾಷ್ಟ್ರೀಯ

ಇಂದಿರಾ ಗಾಂಧಿ ಪಾರ್ಸಿಯನ್ನು ಮದುವೆಯಾಗಿದ್ದರೂ ಮತಾಂತರಗೊಂಡಿಲ್ಲ: ಶಂಕರಾಚಾರ್ಯ

Pinterest LinkedIn Tumblr

shankaracharyಹರಿದ್ವಾರ: ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರು ಪಾರ್ಸಿ ಜನಾಂಗದ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದರೂ ಮತಾಂತರಗೊಂಡಿರಲಿಲ್ಲ ಎಂದು ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಅವರು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಂದಿರಾ ಗಾಂಧಿ ಅವರು ಎಂದಿಗೂ ವಿದೇಶಿ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲಿಲ್ಲ. ಬದಲಾಗಿ ಭಾರತೀಯ ದೇವರನ್ನು ಆರಾಧಿಸುತ್ತಿದ್ದರು. ಅಷ್ಟೇ ಏಕೆ ಭಾರತಕ್ಕಾಗಿ ಇಂದಿರಾ ಕುಟುಂಬ ಹಲವು ತ್ಯಾಗ ಮಾಡಿದೆ ಎಂದು 94 ವರ್ಷದ ಸ್ವಾಮೀಜಿ ಮಾಜಿ ಪ್ರಧಾನಿಯನ್ನು ಹಾಡಿ ಹೊಗಳಿದ್ದಾರೆ.
ಈ ಹಿಂದೆ ಮಹಾರಾಷ್ಟ್ರದಲ್ಲಿನ ಬರದ ಕುರಿತು ಪ್ರತಿಕ್ರಿಯಿಸಿ, ಶಿರಡಿ ಸಾಯಿ ಬಾಬಾರನ್ನು ಪೂಜೆ ಮಾಡಿದ್ದಕ್ಕೆ ರಾಜ್ಯದಲ್ಲಿ ಬರ ಬಂತು ಎಂದು ಹೇಳಿದ್ದರು. ಅಲ್ಲದೆ ಮಹಿಳೆಯರು ಶನಿಶಿಂಗ್ಣಾಪುರ ದೇಗುಲ ಪ್ರವೇಶಿಸಿ ಅಲ್ಲಿಯ ಶನಿಯ ಶಿಲೆಯನ್ನು ಸ್ಪರ್ಷ ಮಾಡಿದ್ದರಿಂದ ಅತ್ಯಾಚಾರ ಪ್ರಕರಣ ಅಧಿಕವಾಗಲಿದೆ ಎಂದು ಭವಿಷ್ಯ ನುಡಿದಿದ್ದರು, ಇದೀಗ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

Write A Comment