ಮುಂಬೈ(ಪಿಟಿಐ): ಸಾಲದ ಸುಳಿಯಲ್ಲಿ ಸಿಲುಕಿರುವ ವಿಜಯ್ ಮಲ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪಾಸ್ಪೋರ್ಟ್ ಅಮಾನತುಗೊಂಡ ಬೆನ್ನಲ್ಲೇ, ಮಲ್ಯ ವಿರುದ್ಧ ಇದೀಗ ಜಾಮೀನು ರಹಿತ ವಾರೆಂಟ್ ಜಾರಿಗೊಂಡಿದೆ.
ಐಡಿಬಿಐ ಬ್ಯಾಂಕ್ ಸಾಲದ ಹಣಲೇವಾದೇವಿ ಪ್ರಕರಣ ಸಂಬಂಧ ಮಲ್ಯ ವಿರುದ್ಧ ಹಣಲೇವಾದೇವಿ ತಡೆ ವಿಶೇಷ ನ್ಯಾಯಾಧೀಶ ಪಿ.ಆರ್.ಭವ್ಕೆ ಅವರು ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದ್ದಾರೆ.
ಪ್ರಕರಣ ಸಂಬಂಧ ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೆ ಕೋರಿ ಜಾರಿ ನಿರ್ದೇಶನಾಲಯವು(ಇ.ಡಿ) ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.
ಕಿಂಗ್ಫಿಷರ್ ಅರ್ಜಿ ವಜಾ: ಇದೇ ವೇಳೆ, ಮಲ್ಯ ಅವರು ಐಡಿಬಿಐ ಬ್ಯಾಂಕಿನಿಂದ ಪಡೆದ ಸಾಲವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಇ.ಡಿ ಆರೋಪವನ್ನು ಪ್ರಶ್ನಿಸಿ ಕಿಂಗ್ಫಿಷರ್ ಏರ್ಲೈನ್ಸ್ ಸಂಸ್ಥೆ ಸೋಮವಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ.
ಮುಂಬೈ