ರಾಷ್ಟ್ರೀಯ

ಸಮ–ಬೆಸ ನಿಯಮ ಉಲ್ಲಂಘನೆ: ಬಿಜೆಪಿ ಸಂಸದನಿಗೆ ದಂಡ

Pinterest LinkedIn Tumblr

767646ನವದೆಹಲಿ(ಪಿಟಿಐ): ದೆಹಲಿ ಸರ್ಕಾರ ಸಂಚಾರ ದಟ್ಟಣೆ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡಿರುವ ಸಮ–ಬೆಸ ಸಂಖ್ಯೆ ವಾಹನಗಳ ಸಂಚಾರ ನಿಯಮವನ್ನು ಸೋಮವಾರ ಉಲ್ಲಂಘಿಸಿದ ಬಿಜೆಪಿ ಸಂಸದ ವಿಜಯ್ ಗೋಯಲ್ ಅವರಿಗೆ ಸಂಚಾರ ಪೊಲೀಸರು ₹ 2 ಸಾವಿರ ದಂಡ ವಿಧಿಸಿದ್ದಾರೆ.
ಜತೆಗೆ, ದೆಹಲಿ ಸಾರಿಗೆ ಸಚಿವ ಗೋಪಾಲ್ ರಾಯ್ ಅವರು, ವಿಜಯ್ ಗೋಯಲ್ ಅವರ ಮನೆಗೆ ತೆರಳಿಗೆ ಸಚಿವರಿಗೆ ಗುಲಾಬಿ ಹೂ ನೀಡಿ ಸಂಚಾರ ನಿಯಮ ಉಲ್ಲಂಘನೆ ಮಾಡದಂತಿರಲು ಮನವಿ ಮಾಡಿದ್ದಾರೆ.
ಗೋಯಲ್ ಅವರು ಸಂಸತ್ ಮಾರ್ಗದಲ್ಲಿನ ರೈಸಿನ ರಸ್ತೆಯಲ್ಲಿ ತೆರಳುತ್ತಿದ್ದಾಗ ದಂಡ ವಿಧಿಸಲಾಗಿದೆ. ಜತೆಗೆ, ವಾಹನ ಚಾಲನೆ ಪರವಾನಗಿ ಹಾಗೂ ವಾಹನ ವಿಮೆ ಇಲ್ಲದೆ ಇದ್ದುದರಿಂದ ಹೆಚ್ಚುವರಿಯಾಗಿ ₹ 1,500 ದಂಡ ವಿಧಿಸಲಾಗಿದೆ.
ಸಮ–ಬೆಸ ಸಂಖ್ಯೆ ನಿಯಮ ಜಾರಿ ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ಶುಕ್ರವಾರ ಘೋಷಿಸಿದ್ದ ವಿಜಯ್ ಗೋಯಲ್ ಅವರು, ದಂಡ ವಿಧಿಸುವ ನೆಪದಲ್ಲಿ ಎಎಪಿ ಸರ್ಕಾರ ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದೆ ಎಂದು ಆರೋಪಿಸಿದ್ದರು.

Write A Comment