ರಾಷ್ಟ್ರೀಯ

ಕೋರ್ಟ್ ಆವರಣದಲ್ಲಿ ಆಕಸ್ಮಿಕ ಬಾಂಬ್ ಸ್ಫೋಟ : ಮಹಿಳೆ ಗಂಭೀರ, ಹಲವರಿಗೆ ಗಾಯ

Pinterest LinkedIn Tumblr

bamಛಪ್ರಾ(ಬಿಹಾರ),ಏ.18- ಮಹಿಳೆಯೊಬ್ಬಳು ಕೊಂಡೊಯುತ್ತಿದ್ದ ಬಾಂಬ್ ನ್ಯಾಯಾಲಯದ ಆವರಣದಲ್ಲಿ ಆಕಸ್ಮಿಕವಾಗಿ ಸ್ಫೋಟಿಸಿ ಮಹಿಳೆಯೂ ಸೇರಿದಂತೆ ಕೆಲವರು ಗಾಯಗೊಂಡಿದ್ದು, ಬಾಂಬ್ ಕೊಂಡೊಯುತ್ತಿದ್ದ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ವಿರುದ್ಧ ದೂರು ನೀಡಿದ್ದ ವ್ಯಕ್ತಿಯನ್ನು ಗುರಿಯಾಗಿಟ್ಟುಕೊಂಡು ಖುಷ್ಬೂ ಕುಮನ್ ಎಂಬ ಮಹಿಳೆ ಬಾಂಬ್ ತೆಗೆದುಕೊಂಡು ಬಂದಿದ್ದಾಗ ಅದು ಆಕಸ್ಮಿಕವಾಗಿ ಸ್ಪೋಟಗೊಂಡಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ, ಪಂಕಜ್‌ಕುಮಾರ್ ರಾಜ್ ಹೇಳಿದ್ದಾರೆ.

ಬಾಂಬ್ ತಂದಿದ್ದ ಮಹಿಳೆ ಹಾಗೂ ಗಾಯಗೊಂಡ ಇತರರನ್ನು ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ತನ್ನ ವಿರುದ್ಧ ಕೇಸ್ ದಾಖಲಿಸಿದ್ದ ಮತ್ತು ಸಾಕ್ಷಿ ಹೇಳುತ್ತಿದ್ದ ಶಶಿಭೂಷಣ್ ಮತ್ತಿತರರನ್ನು ಗುರಿಯಾಗಿಟ್ಟುಕೊಂಡು ಈ ಮಹಿಳೆ ಕೋರ್ಟ್‌ಗೆ ಬಾಂಬ್ ತಂದಿದ್ದಳು.

Write A Comment