ಮುಂಬೈ

ಬರ ಪ್ರದೇಶದಲ್ಲಿ ಸಚಿವೆ ಪಂಕಜಾ ಮುಂಡೆ ಸೆಲ್ಫಿಗೆ ಶಿವಸೇನೆ ಕಿಡಿ

Pinterest LinkedIn Tumblr

Pankaja Munde

ಮುಂಬೈ: ಬರ ಪೀಡಿತ ಪ್ರದೇಶದಲ್ಲಿ ಮಹಾರಾಷ್ಟ್ರದ ನೀರಾವರಿ ಸಚಿವೆ ಪಂಕಜಾ ಮುಂಡೆ ಸೆಲ್ಫೀ ತೆಗೆದುಕೊಂಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದ್ದು, ಸಚಿವೆ ಇಂತಹ ಕೆಲಸವನ್ನು ಮಾಡುವ ಮುನ್ನ ಯೋಚಿಸಬೇಕಿತ್ತು ಎಂದು ಶಿವಸೇನೆ ಕಿಡಿಕಾರಿದೆ.

ಮಹಾರಾಷ್ಟ್ರ ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿದೆ. ನೀರಿಗಾಗಿ ಮಹಿಳೆಯರು ಹಾಗೂ ಮಕ್ಕಳು ಹಿನ್ನಿಲ್ಲದಂತೆ ಪರದಾಡುತ್ತಿದ್ದಾರೆ. ಬರಪೀಡಿತ ಪ್ರದೇಶಗಳಲ್ಲಿ ಶಿವಸೇನೆ ಇನ್ನಿಲ್ಲದಂತೆ ಕೆಲಸವನ್ನು ಮಾಡುತ್ತಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಸಚಿವೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಸರಿನಾ ಎಂದು ಶಿವಸೇನೆ ಮುಖಂಡ ಮನೀಷ್ ಕಯಾಂದೆ ಕಿಡಿಕಾರಿದ್ದಾರೆ.

ಬರ ಪೀಡಿತ ಪ್ರದೇಶದಲ್ಲಿ ನಿಂತು ಸೆಲ್ಫಿ ಕ್ಲಿಕಿಸಿಕೊಂಡಿರುವುದು ದುರದೃಷ್ಟಕರ ಸಂಗತಿ. ಕೆಲವೊಂದು ಕೆಲಸಗಳನ್ನು ಮಾಡುವ ಮುನ್ನ ಸಚಿವೆ ಪಂಕಜಾ ಮುಂಡೆ ಯೋಚಿಸಬೇಕಿತ್ತು. ಇನ್ನು ಮುಂದಾದರು ಇಂತಹ ಹುಡುಗಾಟದ ಕೆಲವನ್ನು ಮಾಡದಿರಲಿ ಎಂದು ಮನೀಷ್ ಹೇಳಿದ್ದಾರೆ.

ಬರ ಪರಿಸ್ಥಿತಿಯನ್ನು ವೀಕ್ಷಿಸಿಲು ಲಾತೂರ್‍ಗೆ ಪ್ರವಾಸ ಕೈಗೊಂಡಿದ್ದ ಸಚಿವೆ ಪಂಕಜಾ ಮುಂಡೆ, ಈ ವೇಳೆ ನೀರಿಲ್ಲದೆ ಬತ್ತಿ ಹೋಗಿರುವ ಕೆರೆಯ ಬಳಿ ನಿಂತು ಸೆಲ್ಪೀ ತೆಗೆದುಕೊಂಡಿದ್ದರು.

ಅಲ್ಲದೆ ಆ ಫೋಟೋವನ್ನು ಸಾಮಾಜಿಕ ಜಾಲತಾಣ ಟಿಟ್ಟರ್‍ನಲ್ಲಿ ಹಾಕಿಕೊಂಡಿದ್ದಾರೆ. ಆದರೆ ಈ ಸೆಲ್ಫಿ ಕ್ರೇಝ್ ಇದೀಗ ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ.

Write A Comment