ರಾಷ್ಟ್ರೀಯ

ಮೊದಲ ಪತ್ನಿಯನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿದ್ದ ಪತಿ ಬಂಧನ

Pinterest LinkedIn Tumblr

attack

ನವದೆಹಲಿ: ಎರಡನೇ ಹೆಂಡತಿ ವ್ಯಾಮೋಹಕ್ಕೆ ಸಿಲುಕಿದ ಪತಿ ತನ್ನ ಮೊದಲ ಪತ್ನಿಯನ್ನು ಕೊಂದು ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದಿರುವ ಭೀಕರ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.

ದಕ್ಷಿಣ ದೆಹಲಿಯ ಫತೇಪುರ್ ಬೇರಿಯಲ್ಲಿ ವಾಸವಾಗಿದ್ದ ತನ್ನ ಮೊದಲ ಪತ್ನಿ ಫುಲ್ಲು ಬೇಗಂರನ್ನು ಹತ್ಯೆ ಮಾಡಿರುವ ಆರೋಪಿ ಗುಲ್ಬುದ್ದೀನ್ ಮೂಲತಃ ಅಡುಗೆ ಭಟ್ಟನಾಗಿದ್ದು, ಹೆಂಡತಿಯ ದೇಹವನ್ನೇ ತುಂಡು ತುಂಡಾಗಿ ಕತ್ತರಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗುಲ್ಬುದ್ದೀನ್ ಅಸ್ಸಾಂನಲ್ಲಿ ಮಹಿಳೆಯೊಬ್ಬಳನ್ನು ಎರಡನೇ ಮದುವೆಯಾಗಿದ್ದು ಅವಳೊಂದಿಗೆ ವಾಸವಾಗಿದ್ದ ಹೀಗಾಗಿ ತನ್ನ ದಾರಿಗೆ ಅಡ್ಡವಾಗಿದ್ದ ಮೊದಲ ಹೆಂಡತಿಯನ್ನು ತೊಡೆದು ಹಾಕಲು ಆತ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಫತೇಪುರ್ ಬೇರಿ ಬಳಿ ಫುಲ್ಲು ಬೇಗಂ ಅವರ ದೇಹ ಕೊಳೆತ ಸ್ಥಿತಿಯಲ್ಲಿದ್ದು, ಈ ಸಂಬಂಧ ಗುಲ್ಬುದ್ದೀನ್ ನನ್ನು ವಶಕ್ಕೆ ಪಡೆದ ಪೊಲೀಸರ ವಿಚಾರಣೆ ವೇಳೆ ಆರೋಪಿ ತನ್ನ ತಪ್ಪು ಒಪ್ಪಿಕೊಂಡಿದ್ದು ಪೊಲೀಸರ ಅತಿಥಿಯಾಗಿದ್ದಾನೆ.

Write A Comment