ಅಂತರಾಷ್ಟ್ರೀಯ

ಪಾಕಿಸ್ತಾನದಲ್ಲಿ ದಾಖಲೆ ಬರೆದ ಶಾರುಖ್ “ಫ್ಯಾನ್” ! ಬಿಡುಗಡೆಯಾದ ಮೊದಲ 3 ದಿನದಲ್ಲಿ 50 ಮಿಲಿಯನ್ ಗೂ ಹೆಚ್ಚು ಗಳಿಕೆ ಕಂಡು ದಾಖಲೆ

Pinterest LinkedIn Tumblr

Fan

ಇಸ್ಲಾಮಾಬಾದ್: ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ “ಫ್ಯಾನ್” ಚಿತ್ರ ಕೇವಲ ಭಾರತದಲ್ಲಿ ಮಾತ್ರವಲ್ಲದೇ ನೆರೆಯ ಪಾಕಿಸ್ತಾನದ ಬಾಕ್ಸ್ ಆಫೀಸ್ ನಲ್ಲೂ ಧೂಳ್ ಎಬ್ಬಿಸುತ್ತಿದ್ದು, ಬಿಡುಗಡೆಯಾದ ಕೇವಲ ಮೂರೇ ದಿನದಲ್ಲಿ 50 ಮಿಲಿಯನ್ ಗೂ ಅಧಿಕ ಗಳಿಕೆ ಕಂಡಿದೆ.

ಫ್ಯಾನ್ ಚಿತ್ರವನ್ನು ಪಾಕಿಸ್ತಾನದಲ್ಲಿ ಅಧಿಕೃತವಾಗಿ ವಿತರಣೆ ಮಾಡಿರುವ ಜಿಯೋ ಫಿಲಂಸ್ ಸಂಸ್ಥೆ ಹೇಳಿಕೊಂಡಿರುವಂತೆ ಫ್ಯಾನ್ ಚಿತ್ರ ತೆರೆಕಂಡ ಮೂರೇ ದಿನದಲ್ಲಿ 50 ಮಿಲಿಯನ್ ಗೂ ಅಧಿಕ ಗಳಿಕೆ ಕಂಡಿದೆ. ಈ ಪೈಕಿ ಕರಾಚಿ ಮತ್ತು ಲಾಹೋರ್ ಭಾಗದಲ್ಲಿ ಹೆಚ್ಚಿನ ಗಳಿಕೆಯಾಗಿದ್ದು, ಫ್ಯಾನ್ ಚಿತ್ರಕ್ಕೆ ಪಾಕಿಸ್ತಾನದ ಪ್ರೇಕ್ಷಕರು ಅಭೂತಪೂರ್ವ ಯಶಸ್ಸು ನೀಡಿದ್ದಾರೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಮತ್ತು ಥಿಯೇಟರ್ ಗಳಲ್ಲಿ ಚಿತ್ರದ ಟಿಕೆಟ್ ಗಳು ಇನ್ನು ಒಂದು ವಾರಕ್ಕಾಗುವಷ್ಟು ಬುಕ್ ಆಗಿವೆ ಎಂದು ಹೇಳಿಕೊಂಡಿದೆ.

ಇನ್ನು ಕೇವಲ ಪ್ರೇಕ್ಷಕರು ಮಾತ್ರವಲ್ಲದೇ ಫ್ಯಾನ್ ಚಿತ್ರಕ್ಕೆ ಪಾಕಿಸ್ತಾನದ ಪತ್ರಿಕೆಗಳ ಸಿನಿಮಾ ವಿಮರ್ಶಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿರುವುದು ಚಿತ್ರದ ಯಶಸ್ಸಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಫ್ಯಾನ್ ಚಿತ್ರದಲ್ಲಿ ಶಾರುಖ್ ಖಾನ್ ಅವರ ದ್ವಿಪಾತ್ರಾಭಿನಯಕ್ಕೆ ಪ್ರೇಕ್ಷಕರು ಮಾರುಹೋಗಿದ್ದು, ಪಾಕಿಸ್ತಾನದ ಜನತೆ ಚಿತ್ರವನ್ನು ಒಪ್ಪಿದ್ದಾರೆ. ಚಿತ್ರದ ಯಶಸ್ಸನ ಮೂಲಕ ಭಾರತೀಯ ಚಿತ್ರ ತಯಾರಕಿಗೆ ಪಾಕಿಸ್ತಾನ ಕೂಡ ತಮ್ಮ ಚಿತ್ರಗಳಿಗೆ ಪ್ರಮುಖ ಮಾರುಕಟ್ಟೆ ಎಂಬುದನ್ನು ಸ್ಪಷ್ಟಪಡಿಸಿದೆ ಎಂದು ಪಾಕಿಸ್ತಾನದ ಚಿತ್ರವಿತರಕ ನದೀಮ್ ಮಂಡ್ವಿವಾಲಾ ಹೇಳಿದ್ದಾರೆ.

Write A Comment