ರಾಷ್ಟ್ರೀಯ

ಆಟ್ಟಿಂಗಲ್ ಜೋಡಿ ಕೊಲೆ ಪ್ರಕರಣ: ನಿನೋ ಮ್ಯಾಥ್ಯೂಗೆ ಗಲ್ಲು, ಅನುಶಾಂತಿಗೆ ಜೀವಾವಧಿ ಶಿಕ್ಷೆ

Pinterest LinkedIn Tumblr

atttingal-murder

ತಿರುವನಂತಪುರಂ: ಆಟ್ಟಿಂಗಲ್ ಜೋಡಿ ಕೊಲೆ ಪ್ರಕರಣದ ದೋಷಿ ನಿನೋ ಮ್ಯಾಥ್ಯೂ ಅವರಿಗೆ ತಿರುವನಂತಪುರಂ ಪ್ರಿನ್ಸಿಪಲ್ ಸೆಷನ್ಸ್ ನ್ಯಾಯಾಲಯ ಸೋಮವಾರ ಗಲ್ಲು ಶಿಕ್ಷೆ ವಿಧಿಸಿದೆ.

ಅದೇ ವೇಳೆ ಪ್ರಕರಣದ ಎರಡನೇ ದೋಷಿ ಅನು ಶಾಂತಿ ಅವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಸ್ತುತ ಪ್ರಕರಣವು ವಿರಾಳಾತಿವಿರಳ ಎಂದು ಹೇಳಿದ ನ್ಯಾಯಾಲಯ ಅನುಶಾಂತಿ ಮಾತೃತ್ವಕ್ಕೇ ಅವಮಾನವೆಸಗಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ. ಶಿಕ್ಷೆಯ ಜತೆ ಇವರಿಬ್ಬರಿಗೆ ತಲಾ ರು.50 ಲಕ್ಷ ದಂಡ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.

ಏನಿದು ಪ್ರಕರಣ?: ಟೆಕ್ನೋಪಾರ್ಕ್‌ನಲ್ಲಿ ಸಹೋದ್ಯೋಗಿಗಳಾಗಿದ್ದ ನಿನೋ ಮತ್ತು ಆತನ ಪ್ರೇಯಸಿ ಅನು ಶಾಂತಿ 2014 ಏಪ್ರಿಲ್ 16 ರಂದು ಆಲಂಗೋಡ್‌ನಲ್ಲಿ ಈ ಜೋಡಿ ಕೊಲೆ ಮಾಡಿದ್ದರು.

ಅನುಶಾಂತಿಯ ಮೂರು ವರ್ಷದ ಮಗಳ ಸ್ವಸ್ಥಿಕ ಮತ್ತು ಅತ್ತೆ ಓಮನ ಎಂಬವರನ್ನು ಇವರು ಅತಿ ಕ್ರೂರವಾಗಿ ಕೊಲೆ ಮಾಡಿದ್ದರು. ವಿವಾಹಿತೆಯಾಗಿದ್ದ ಅನು ಶಾಂತಿ ನಿನೋ ಜತೆ ಪ್ರೇಮಸಂಬಂಧ ಹೊಂದಿದ್ದು, ಇದಕ್ಕೆ ತನ್ನ ಕುಟುಂಬ ಅಡ್ಡಿಯಾಗಬಾರದೆಂದು ಬಯಸಿ ತನ್ನ ಮಗಳನ್ನು ಮತ್ತು ಅತ್ತೆಯನ್ನು ಪ್ರಿಯಕರ ನಿನೋ ಜತೆ ಸೇರಿ ಹತ್ಯೆ ಮಾಡಿದ್ದರು. ಅನು ಅವರ ಪತಿ ಲಿಜೀಶ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದರೂ, ಕೂದಲೆಳೆಯ ಅಂತರದಿಂದ ಲಿಜೀಶ್ ಪಾರಾಗಿದ್ದರು.

Write A Comment