ಮುಂಬೈ

ಕ್ರಿಕೆಟ್​ಗಿಂತ ಅಭಿನಯ ಕಷ್ಟ, ಸಚಿನ್ ಅಭಿಮತ

Pinterest LinkedIn Tumblr

sachine-webಮುಂಬೈ: ಮೈದಾನದಲ್ಲಿ ಕ್ರಿಕೆಟ್ ಆಡುವುದಕ್ಕೂ, ಕ್ಯಾಮೆರಾ ಮುಂದೆ ಆಡಿದಂತೆ ನಟಿಸುವುದಕ್ಕೂ ತುಂಭಾ ವ್ಯತ್ಯಾಸವಿದೆ. ಕ್ರೀಡಾಂಗಣದಲ್ಲಿ ಸುಲಭವಾಗಿ ಬೌಂಡರಿ, ಸಿಕ್ಸರ್ ಸಿಡಿಸಬಹುದು ಆದರೆ ಅಭಿನಯ ಹಾಗಲ್ಲ ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

‘ಸಚಿನ್ ದ ಫಿಲ್ಮ್’ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ, ನಾನು ಕ್ರಿಕೆಟ್ ಮೈದಾನದಲ್ಲಿ ಕಳೆದ ಸಮಯ ಅರಿವಿಲ್ಲದೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಇದೀಗ ಅದನ್ನು ಪುನಃ ಅಭಿನಯಿಸಿ ತೋರಿಸುವುದು ಕಷ್ಟ ಸಾಧ್ಯ, ನಾನು ಅಭಿನಯಕ್ಕಿಂತ ಹೆಚ್ಚಾಗಿ ಕ್ರಿಕೆಟ್​ನ್ನು ಪ್ರೀತಿಸುತ್ತೇನೆ ಎಂದು 42ರ ಹರೆಯದ ಸಚಿನ್ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಮುಂಬೈ ಮೂಲದ ಚಿತ್ರ ನಿರ್ಮಾಣ ಕಂಪನಿ 200 ನಾಟೌಟ್ ಸಚಿನ್ ಕುರಿತಾದ ಚಿತ್ರ ನಿರ್ಮಿಸುತ್ತಿದ್ದು, ಲಂಡನ್ ಮೂಲದ ಜೇಮ್್ಸ ಎಸ್ಕೈನ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

Write A Comment