ರಾಷ್ಟ್ರೀಯ

ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ, ಕುಳಿತಲ್ಲೇ ಮನೆ ಆಹಾರ ಲಭ್ಯ

Pinterest LinkedIn Tumblr

Railway-passengers-webನವದೆಹಲಿ: ಇನ್ನು ಮುಂದೆ ರೈಲ್ವೆ ನಿಲ್ದಾಣದಲ್ಲಿ ಉತ್ತಮ ಗುಣಮಟ್ಟದ ಆಹಾರಕ್ಕಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಲೆಯ ಬೇಕಾದ ಅಗತ್ಯತೆ ಇಲ್ಲ. ರೈಲಿನಲ್ಲಿ ನಿಮ್ಮ ಆಸನದ ಬಳಿಯೇ ರುಚಿ ರುಚಿಯಾದ ಮನೆಯಲ್ಲಿ ತಯಾರಿಸಿದ ಆಹಾರ ಸಿಗುತ್ತದೆ.

ಹೌದು, ರೈಲಿನ ಪ್ರಯಾಣ ಅವಧಿಯಲ್ಲಿ ಸ್ವಸಹಾಯ ಗುಂಪುಗಳು (ಎಸ್​ಹೆಚ್​ಜಿಎಸ್ ) ಆಹಾರ ಒದಗಿಸಲು ಮುಂದಾಗಿವೆ. ಆರಂಭಿಕ ಸೇವೆಯಾಗಿ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ನೀಡಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ಇಲಾಖೆ ಅಧ್ಯಕ್ಷ ಎಕೆ ಮನೋಚ, ಕೃಷಿ ಮತ್ತು ಗ್ರಾಮಿಣಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಎಸ್​ಹೆಚ್​ಜಿಎಸ್ ಕಾರ್ಯನಿರ್ವಹಿಸುತ್ತಿದೆ. ಇದಕ್ಕಾಗಿ ಸ್ಥಳೀಯ ರೈತರು ತಮ್ಮ ಜಮೀನಿನಲ್ಲಿ ಬೆಳದ ಕಾಯಿ ಫಲ್ಲೆಯಿಂದ ಆಹಾರ ತಯಾರಿಸಿ ಎಸ್​ಹೆಚ್​ಜಿಎಸ್​ಗೆ ಒದಗಿಸುತ್ತಿದ್ದಾರೆ ಎಂದು ತಿಳಿಸಿದರು.

ಪ್ರಯಾಣಿಕರು ತಮಗೆ ಬೇಕಾದ ಆಹಾರವನ್ನು ಐಆರ್​ಟಿಸಿ ವೆಬ್ ತಾಣದಲ್ಲಿ ಕೂಡ ಆರ್ಡರ್ ಮಾಡಿ ಪಡೆಯಬಹುದಾಗಿದೆ.

Write A Comment