ಮುಂಬೈ

ಐಪಿಎಲ್ ಬೇರೆಕಡೆ ಸ್ಥಳಾಂತರವಾದರೆ ಮಹಾಗೆ 100 ಕೋಟಿ ನಷ್ಟ: ಠಾಕೂರ್

Pinterest LinkedIn Tumblr

TAKURಮುಂಬೈ: ಒಂದು ವೇಳೆ ಐಪಿಎಲ್ ಪಂದ್ಯಾವಳಿ ರಾಜ್ಯದಿಂದ ಬೇರೆಕಡೆ ಸ್ಥಳಾಂತರವಾದರೆ ಮಹಾರಾಷ್ಟ್ರ ಸರ್ಕಾರ 100 ಕೋಟಿ ರುಪಾಯಿ ಕಳೆದುಕೊಳ್ಳಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ಶನಿವಾರ ಎಚ್ಚರಿಸಿದ್ದಾರೆ.
ನಿನ್ನೆಯಷ್ಟೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯವನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರಿಸಿದರೂ ನಮಗೇನು ತೊಂದರೆ ಇಲ್ಲ ಎಂದಿದ್ದರು. ಈ ಬಗ್ಗೆ ಇಂದು ವರದಿಗಾರರಿಗೆ ಪ್ರತಿಕ್ರಿಯಿಸಿದ ಠಾಕೂರ್, ‘ಐಪಿಎಲ್ ನಿಂದಾಗಿ ಮಹಾರಾಷ್ಟ್ರ ಸರ್ಕಾರಕ್ಕೆ 100 ಕೋಟಿ ಲಾಭವಾಗುತ್ತಿದೆ. ಒಂದು ವೇಳೆ ಪಂದ್ಯಾವಳಿ ಸ್ಥಳಾಂತರವಾದರೆ ರಾಜ್ಯಕ್ಕೆ 100 ಕೋಟಿ ರುಪಾಯಿ ನಷ್ಟವಾಗುತ್ತದೆ’ ಎಂದಿದ್ದಾರೆ.
ಐಪಿಎಲ್ ಪಂದ್ಯಾವಳಿಗೆ ಕುಡಿಯುವ ನೀರನ್ನು ಸರ್ಕಾರ ಪೂರೈಕೆ ಮಾಡುವುದಿಲ್ಲ. ಅಲ್ಲದೇ ಐಪಿಎಲ್ ಪಂದ್ಯಾವಳಿಯನ್ನು ಬೇರೆಡೆಗೆ ಸ್ಥಳಾಂತರಿಸಿದರೂ ಯಾವುದೇ ತೊಂದರೆ ಇಲ್ಲ ಎಂದು ದೇವೇಂದ್ರ ಫಡ್ನವೀಸ್ ಶುಕ್ರವಾರ ತಿಳಿಸಿದ್ದರು.

Write A Comment