ರಾಷ್ಟ್ರೀಯ

ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮದ್ಯ ನಿಷೇಧ: ತಮಿಳುನಾಡು ಸಿಎಂ ಜಯಾ

Pinterest LinkedIn Tumblr

jaya-9ಚೆನ್ನೈ: ರಾಜ್ಯದಲ್ಲಿ ಎಐಎಡಿಎಂಕೆ ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲಾ ರೀತಿಯ ಮಧ್ಯ ಮಾರಾಟವನ್ನು ನಿಷೇಧಿಸುವುದಾಗಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಶನಿವಾರು ಹೇಳಿದ್ದಾರೆ.
ಇಂದು ಆರ್.ಕೆ.ನಗರದ ಐಲ್ಯಾಂಡ್ ಮೈದಾನದಲ್ಲಿ ತಮಿಳುನಾಡು ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಜಯಲಲಿತಾ, ನಾನು ಸುಳ್ಳು ಭರವಸೆಗಳನ್ನು ನೀಡುವುದಿಲ್ಲ ಎಂಬುದು ಜನರಿಗೆ ಗೊತ್ತಿದೆ. ಚುನಾವಣೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ನಾವು ಈಡೇರಿಸಿದ್ದೇವೆ ಎಂದರು.
5 ವರ್ಷಗಳ ಹಿಂದೆ ರಾಜ್ಯದಲ್ಲಿ ನಿತ್ಯ ವಿದ್ಯುತ್ ಕಡಿತವಾಗುತ್ತಿತ್ತು. ಆದರೆ ಇಂದು ರಾಜ್ಯದ ಜನತೆಗೆ ನಿರಂತರ ವಿದ್ಯುತ್ ನೀಡುತ್ತಿದ್ದೇವೆ. ಪ್ರವಾಹ ಪೀಡಿತ ಜನರಿಗೆ 658 ಕೋಟಿ ರುಪಾಯಿ ನೀಡಿದ್ದೇವೆ. ಕ್ಯಾಂಟಿನ್, ನೀರು, ಔಷಧಿಯನ್ನು ಸಮರ್ಪಕವಾಗಿ ಪೂರೈಸಿದ್ದೇವೆ ಎಂದರು.
ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಸುಮಾರು 2 ಲಕ್ಷ ಜನ ಭಾಗವಹಿಸಿದ್ದರು. ಕಾರ್ಯಕ್ರಮಕ್ಕಾಗಿ 234 ಕ್ಷೇತ್ರಗಳಲ್ಲಿ ಸುಮಾರು 500 ಬಿಗ್ ಸ್ಕ್ರೀನ್ ಗಳನ್ನು ಸೆಟ್ ಮಾಡಲಾಗಿತ್ತು.

Write A Comment