ರಾಷ್ಟ್ರೀಯ

ಕೇಜ್ರಿವಾಲ್‌ಕಡೆ ಶೂ ಎಸೆದ ವ್ಯಕ್ತಿ ಬಂಧನ

Pinterest LinkedIn Tumblr

lghm2xts

ನವದೆಹಲಿ(ಪಿಟಿಐ): ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರತ್ತ ಶೂ ಹಾಗೂ ಸಿ.ಡಿ. ಎಸೆದ ವ್ಯಕ್ತಿಯೊಬ್ಬ, ತಾನು ಆಮ್ ಆದ್ಮಿ ಸೇನಾ ಕಾರ್ಯಕರ್ತ ಎಂದು ಘೋಷಣೆ ಕೂಗಿದ ಘಟನೆ ಶನಿವಾರ ನಡೆದಿದೆ. ಘಟನೆ ಬಳಿಕ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಶೂ ಎಸೆದ ವ್ಯಕ್ತಿಯನ್ನು ವೇದ ಪ್ರಕಾಶ್ ಶರ್ಮ ಎಂದು ಪೊಲೀಸರು ಗುರುತಿಸಿದ್ದಾರೆ.
ದೆಹಲಿಯಲ್ಲಿ ಸಮ–ಬೆಸ ಸಂಖ್ಯೆ ವಾಹನಗಳ ಸಂಚಾರದ ಎರಡನೇ ಹಂತವನ್ನು ಏ. 15ರಿಂದ ಜಾರಿಗೆ ತರುವ ಕುರಿತು ಪತ್ರಿಕಾಗೋಷ್ಠಿಯಲ್ಲಿ ಕೇಜ್ರಿವಾಲ್ ಮಾಹಿತಿ ನೀಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಶೂ ಎಸೆದ ವ್ಯಕ್ತಿಯನ್ನು ಕಾರ್ಯಕರ್ತರು ಅಲ್ಲಿಂದ ಹೊರಗೆ ಎಳೆದೊಯ್ದಿದ್ದಾರೆ. ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ ಬಳಿಕ ಆತನ ಹೆಸರು ವೇದ ಪ್ರಕಾಶ ಶರ್ಮ ಎಂದು ತಿಳಿದಿದೆ.
‘ಅರವಿಂದ್‌ ಜಿ, ಒಂದು ನಿಮಿಷ ಪ್ಲೀಸ್. ನಾನು ಸಿಎನ್‌ಜಿ ಸ್ಟಿಕರ್ ಹಗರಣದ ಬಗ್ಗೆ ಮಾರುವೇಷದ ಕಾರ್ಯಾಚರಣೆ ನಡೆಸಿದ್ದೇನೆ. ಒಂದು ಸಿಎನ್‌ಜಿ ಸ್ಟಿಕರ್ ₹ 1 ಸಾವಿರಕ್ಕೆ ವಿತರಣೆಯಾಗುತ್ತಿದೆ. ಹೀಗೇಕೆ? ನೀವೇನು ಮಾಡುತ್ತಿದ್ದೀರಿ? ಏಕೆ ಕ್ರಮ ಕೈಗೊಂಡಿಲ್ಲ’ ಎಂದು ವೇದ ಪ್ರಕಾಶ್ ಶರ್ಮ ಕೇಜ್ರಿವಾಲ್ ಅವರತ್ತ ಶೂ ಮತ್ತು ಸಿ.ಡಿ. ಎಸೆಯುವ ಮುನ್ನ ಘೋಷಣೆ ಕೂಗಿದ್ದಾನೆ.

Write A Comment