ಮುಂಬೈ

ಭಾರತ – ಪಾಕ್‌ ನಂಟು: ಸಾನಿಯಾ-ಶೋಯಿಬ್‌ ಜಾಹೀರಾತು ವಿಡಿಯೋ ವೈರಲ್‌ !

Pinterest LinkedIn Tumblr

Sania-Shoib-700ಮುಂಬಯಿ : ಭಾರತ – ಪಾಕಿಸ್ಥಾನ ರಾಜಕೀಯ ಸಂಬಂಧಗಳು ಹಳಸಿರಬಹುದು – ಆದರೆ ಉಭಯ ದೇಶಗಳ ಕ್ರೀಡಾ ಬಾಂಧವ್ಯವು ಈ ಹಳಸಿದ ಸಂಬಂಧವನ್ನು ಸುಧಾರಿಸುವುದಕ್ಕೆ ಅನುಕೂಲಕರವಾದೀತು ಎಂಬ ನಂಬಿಕೆ ಉಭಯ ದೇಶಗಳ ಜನರಲ್ಲಿ ಇರುವುದಕ್ಕಿಂತಲೂ ಮಿಗಿಲಾಗಿ ಪಾಕ್‌ ಜಾಹೀರಾತು ವಲಯದಲ್ಲಿ ತೀವ್ರವಾಗಿದೆ ಎಂದು ಈಗ ಹೇಳಬಹುದಾಗಿದೆ !

ಇದಕ್ಕೆ ಸಾಕ್ಷಿ ಎಂಬಂತೆ ವಿಶ್ವ ಪ್ರಸಿದ್ಧ ಭಾರತೀಯ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಮತ್ತು ಆಕೆಯ ಪಾಕ್‌ ಕ್ರಿಕೆಟ್‌ ಆಟಗಾರ ಪತಿ ಶೋಯಿಬ್‌ ಮಲಿಕ್‌ ಅವರನ್ನು ನಿಜ ಜೀವನದಂತೆ ದಂಪತಿಯಾಗಿ ಕಾಣಿಸಲಾಗಿರುವ ನೆಸ್ಲೆ ಟಿವಿ ಜಾಹೀರಾತಿನ ವಿಡಿಯೋ ಚಿತ್ರಿಕೆ ಈಗ ಭಾರತ ಮತ್ತು ಪಾಕಿಸ್ಥಾನದಲ್ಲಿ ಏಕಪ್ರಕಾರವಾಗಿ ವೈರಲ್‌ ಆಗಿದೆ. ಅಂದ ಹಾಗೆ ಈ ಜಾಹೀರಾತು ವಿಡಿಯೋವನ್ನು ಪಾಕಿಸ್ಥಾನದಲ್ಲಿ ಸಿದ್ಧಪಡಿಸಲಾಗಿದೆ !

ನಿಜ ಜೀವನದಲ್ಲಿರುವಂತೆ ಈ ಜಾಹೀರಾತು ವಿಡಿಯೋದಲ್ಲೂ ಸಾನಿಯಾ – ಮಲಿಕ್‌ ಪತಿ ಅನ್ಯೋನ್ಯ ದಂಪತಿಯಾಗಿದ್ದು ಭಾರತ ಮತ್ತು ಪಾಕಿಸ್ಥಾನ ದ ಅತ್ಯಂತ ಪ್ರಸಿದ್ಧ ಸಂಗತಿಗಳ ಬಗ್ಗೆ ಇವರು ಸಿಹಿ – ಕಹಿ ಯುದ್ಧದಲ್ಲಿ ವ್ಯಸ್ತರಾಗಿರುವುದು ಕಂಡು ಬರುತ್ತದೆ.

ತುಂಬಾ ಮುದ್ದು ಮುದ್ದಾದ ದಂಪತಿಯಾಗಿ ಈ ಜಾಹೀರಾತು ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಸಾನಿಯಾ – ಮಲಿಕ್‌ ಜೋಡಿ ಎಲ್ಲರನ್ನೂ ಏಕಪ್ರಕಾರವಾಗಿ ಆಕರ್ಷಿಸುತ್ತಾರೆ. ವಿಡಿಯೋ ನೋಡಿ ನೀವೂ ಆನಂದಿಸಿ.
-ಉದಯವಾಣಿ

Write A Comment