ಮುಂಬೈ

ಗಂಡು ಶಿಶುವಿಗೆ ಜನ್ಮ ನೀಡಿ ತಾಯಿಯಾದ ಭಾರತದ ಮೊದಲ ಪ್ರಣಾಳ ಶಿಶು ಹರ್ಷಾ

Pinterest LinkedIn Tumblr

ಸಿಮುಂಬೈ ಮಾ.08 : 30 ವರುಷಗಳ ಹಿಂದೆ ಮುಂಬೈನಲ್ಲಿ ಮೊದಲ ಪ್ರಣಾಳ ಶಿಶು ಹರ್ಷಾಳ ಜನನವಾಗಿತ್ತು. ಆ ಹರ್ಷಾ ಸೋಮವಾರ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮುಂಬೈಯ ಜಸ್‌ಲೋಕ್ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಹರ್ಷಾ ಶಾ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಡಾ. ಇಂದಿರಾ ಹಿಂದೂಜ ಮತ್ತು ಡಾ ಕುಸುಮ್ ಜವೇರಿ ಅವರ ಸಹಾಯದಿಂದ ಈ ಸಿಸೇರಿಯನ್ ನಡೆದಿದೆ.  ಐವಿಎಫ್ ಮೂಲಕ ಜನಿಸಿದ (ಪ್ರಣಾಳ ಶಿಶು) ಮಗು ಮುಂದೆ ಬೆಳೆದು ದೊಡ್ಡವಳಾಗಿ ಮಗುವಿಗೆ ಜನ್ಮ ನೀಡಲು ಸಾಧ್ಯವೆ ಎಂಬ ಪ್ರಶ್ನೆ ಹಲವರಿಗಿತ್ತು .

ಆದರೆ ಪ್ರಣಾಳ ಶಿಶು ಕೂಡಾ ಸಾಧಾರಣ ಮಗುವಿನಂತೆ ಬೆಳೆದು ಮಗುವಿಗೆ ಜನ್ಮ ನೀಡಬಲ್ಲುದು ಎಂಬುದಕ್ಕೆ ಹರ್ಷಾ ಉದಾಹರಣೆ ಎಂದು ಐವಿಎಫ್ ತಜ್ಞರೊಬ್ಬರು ಹೇಳಿದ್ದಾರೆ.  ಹರ್ಷಾ ಅವರ ಮಗು ಆರೋಗ್ಯವಾಗಿದ್ದು,  3.1 ಕೆಜಿಯಷ್ಟು ತೂಕ ಹೊಂದಿದೆ ಎಂದು ವೈದ್ಯರು ಹೇಳಿದ್ದಾರೆ.

Write A Comment