ರಾಷ್ಟ್ರೀಯ

ಇಪಿಎಫ್‌ ಮೇಲಿನ ತೆರಿಗೆ ಪ್ರಸ್ತಾವ ಹಿಂಪಡೆದ ಕೇಂದ್ರ

Pinterest LinkedIn Tumblr

Jaitleyನವದೆಹಲಿ (ಪಿಟಿಐ): ತೀವ್ರತರ ಟೀಕೆ, ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ, ಬಜೆಟ್‌ನಲ್ಲಿ ಘೋಷಿಸಿದ್ದ ನೌಕರರ ಭವಿಷ್ಯ ನಿಧಿ(ಇಪಿಎಫ್‌) ಮೇಲೆ ತೆರಿಗೆ ವಿಧಿಸುವ ಪ್ರಸ್ತಾವವನ್ನು ಮಂಗಳವಾರ ಹಿಂಪಡೆದಿದೆ.

2016–17ನೇ ಸಾಲಿನ ಬಜೆಟ್‌ ಮಂಡನೆಯ ವೇಳೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಇಪಿಎಫ್‌ ಹಿಂಪಡೆಯುವ ವೇಳೆ ಶೇಕಡ 40ರಷ್ಟು ಮೊತ್ತವನ್ನು ತೆರಿಗೆ ಮುಕ್ತ ಹಾಗೂ ಇನ್ನುಳಿದ ಶೇ 60ರಷ್ಟು ಮೊತ್ತಕ್ಕೆ ತೆರಿಗೆ ವಿಧಿಸುವುದಾಗಿ ಹೇಳಿದ್ದರು.

ಸರ್ಕಾರದ ಈ ನಡೆಗೆ ನೌಕರರ ಒಕ್ಕೂಟಗಳು ಸೇರಿದಂತೆ ರಾಜಕೀಯ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು.

ಇದೀಗ ಒತ್ತಡಕ್ಕೆ ಮಣಿದು ಲೋಕಸಭೆಯಲ್ಲಿ ಸ್ವಯಂ ಹೇಳಿಕೆ ನೀಡಿದ ಜೇಟ್ಲಿ, ‘ದೊರೆತ ಪ್ರತಿಕ್ರಿಯೆಗಳ ಆಧಾರದಲ್ಲಿ ಈ ಪ್ರಸ್ತಾವವನ್ನು ಸರ್ಕಾರವು ಸಮಗ್ರವಾಗಿ ಪುನರ್‌ ಪರಿಶೀಲನೆ ಮಾಡಲು ಬಯಸಿದೆ. ಆದ್ದರಿಂದ ನಾನು ಈ ಪ್ರಸ್ತಾವವನ್ನು ಹಿಂಪಡೆಯುತ್ತೇನೆ’ ಎಂದರು.

Write A Comment