ರಾಷ್ಟ್ರೀಯ

‘ನನ್ನಿಂದಾಗಿ ಪಿಎಫ್ ಮೇಲಿನ ತೆರಿಗೆ ಹಿಂತೆಗೆತ’

Pinterest LinkedIn Tumblr

rahul-gandhi-e1457437795718ದೆಹಲಿ: ಪಿಎಫ್ ಮೇಲೆ ಯಾವುದೇ ತೆರಿಗೆ ವಿಧಿಸುವುದಿಲ್ಲ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಇಂದು ಘೋಷಿಸಿದ ಬೆನ್ನಲ್ಲೇ ರಾಹುಲ್ ಇದರ ಹಿಂದೆ ನನ್ನಒತ್ತಡವಿತ್ತು ಎಂದು ತಿಳಿಸಿದ್ದಾರೆ.

ಬಜೆಟ್ ನಲ್ಲಿ ಪಿಎಫ್ ಮೇಲೆ ತೆರಿಗೆ ವಿಧಿಸುವ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಪ್ರತಿಪಕ್ಷಗಳಿಂದ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಕಪ್ಪುಹಣ ತರುತ್ತೇನೆಂದು ಹೇಳುತ್ತಿದ್ದ ಸರ್ಕಾರ ಮಧ್ಯಮ ವರ್ಗದ ಜೀವನಾಧರಿತ ಪಿಎಫ್ ತ್ತ ಮುಖ ಮಾಡಿದೆ ಎಂದು ಟೀಕೆಗಳು ಬರುತ್ತಿದ್ದವು. ಇದೀಗ, ಸರ್ಕಾರದ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಇದು ಹಿಂದೆ ನಾನು ಹಾಕಿದ ಒತ್ತಡದ ಪ್ರತಿಫಲವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

‘ಸಂಬಳದಾರರ ಮೇಲೆ ಭಾರ ಹಾಕುವ ಕುರಿತಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಸರ್ಕಾರದ ನಿರ್ಧಾರದಿಂದ ಮಧ್ಯಮ ವರ್ಗದ ಜನಕ್ಕೆ ತೊಂದರೆಯಾಗುತ್ತದೆ ಎಂದು ಹೋರಾಟ ನಡೆಸಿದ್ದೆ. ಇದೀಗ, ಸರ್ಕಾರ ಪಿಎಫ್ ಮೇಲಿನ ತೆರಿಗೆ ನಿರ್ಧಾರ ಹಿಂಪಡೆದಿರುವುದು ಸಂತಸ ತಂದಿದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Write A Comment