ಅಂತರಾಷ್ಟ್ರೀಯ

ಮದ್ದು ಸೇವನೆ ಒಪ್ಪಿಕೊಂಡ ಶರಪೋವಾ

Pinterest LinkedIn Tumblr

Sharapovaಲಾಸ್‌ ಎಂಜಲೀಸ್‌(ಎಎಫ್‌ಪಿ): ಟೆನಿಸ್‌ ಕ್ರೀಡೆಯಲ್ಲಿ ಫಿಕ್ಸಿಂಗ್ ವಿವಾದದ ಬೆನ್ನಲ್ಲೆ, ಉದ್ದೀಪನ ಮದ್ದು ಸೇವನೆಯ ಅಲೆ ಎದಿದ್ದೆ.

ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ವೇಳೆ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿರುವುದಾಗಿ 5 ಬಾರಿಯ ಗ್ರ್ಯಾಂಡ್‌ ಸ್ಲ್ಯಾಮ್‌ ಚಾಂಪಿಯನ್‌ ಮರಿಯಾ ಶರಪೋವಾ ಹೇಳಿಕೊಂಡಿದ್ದಾರೆ.

ಮೆಲ್ಡೊನಿಯನ್‌ ಸೇವಿಸಿರುವುದಾಗಿ ಪರೀಕ್ಷೆಯ ವೇಳೆ ಸಾಬೀತಾಗಿತ್ತು. 2006ರಿಂದಲೂ ಇದನ್ನು ಸೇವಿಸಿಕೊಂಡು ಬರುತ್ತಿದ್ದೆ.
ಆದರೆ, ಇದೇ ವರ್ಷದಿಂದ ಈ ವಸ್ತುವನ್ನು ನಿಷೇಧಿತ ಪಟ್ಟಿಗೆ ಸೇರಿಸಲಾಗಿದೆ. ಕಣ್ತಪ್ಪಿನಿಂದ ಈ ಉಲ್ಲಂಘನೆಯಾಗಿದೆ ಎಂದು ಶರಪೋವಾ ಹೇಳಿಕೊಂಡಿದ್ದಾರೆ.

ವಿಶ್ವ ಮಾದಕ ವಸ್ತು ತಡೆ ಸಂಸ್ಥೆಯು 2016ರಲ್ಲಿ ನಿಷೇಧಿತ ವಸ್ತುಗಳ ಪಟ್ಟಿಯನ್ನು ಪರಿಷ್ಕೃರಣೆ ಮಾಡಿದೆ. ಪಟ್ಟಿಗೆ ಮೆಲ್ಡೊನಿಯನ್ ಪದಾರ್ಥವನ್ನೂ ನಿಷೇಧಿತ ಪಟ್ಟಿಗೆ ಸೇರಿಸಲಾಗಿದೆ.

‘ಪರೀಕ್ಷೆಯಲ್ಲಿ ನಾನು ವಿಫಲವಾಗಿದ್ದೆ. ಅದರ ಪೂರ್ಣ ಹೊಣೆ ಹೊರುವೆ’ ಎಂದು ಲಾಸ್‌ ಎಂಜಲೀಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಖಿನ್ನಗೊಂಡು ಶರಪೋವಾ ನುಡಿದರು.

‘ನಾನೊಂದು ಬೃಹತ್ ತಪ್ಪು ಮಾಡಿದೆ. ನನ್ನ ಅಭಿಮಾನಿಗಳಿಗೆ ನಿರಾಸೆ ಮಾಡಿದೆ. ನಾಲ್ಕು ವರ್ಷದವಳಿದ್ದಾಗಿನಿಂದಲೂ ‌ಆಳವಾಗಿ ಪ್ರೀತಿಸುತ್ತ ಬಂದ ನನ್ನ ಕ್ರೀಡೆಯನ್ನು ವಂಚಿಸಿದೆ’ ಎಂದು ಅವರು ಗದ್ಗಿತರಾದರು.

‘ಇದರಿಂದಾಗಿ ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಗೊತ್ತಿದೆ. ಈ ಬಗೆಯಲ್ಲಿ ವೃತ್ತಿ ಜೀವನ ಕೊನೆಗಾಣಿಸಲು ‌ನಾನು ಇಚ್ಛಿಸುವುದಿಲ್ಲ. ಈ ಆಟ ಆಡಲು ಮತ್ತೊಂದು ಅವಕಾಶ ದೊರೆಯುತ್ತದೆ ಎಂದು ನಾನು ನಿಜಕ್ಕೂ ಭರವಸೆ ಇಟ್ಟಿರುವೆ’ ಎಂದರು.

ಅಮಾನತು ಖಚಿತ?: ಮದ್ದು ಸೇವನೆ ವಿಷಯವನ್ನು ಖಚಿತ ಪಡಿಸಿರುವ ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌(ಐಟಿಎಫ್‌), ‘ಮಾರ್ಚ್‌ 12ರಿಂದ ಶರಪೋವಾ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗುವುದು’ ಎಂದು ತಿಳಿಸಿದೆ.

ಸಹಕಾರದ ಭರವಸೆ: ಐಟಿಎಫ್ ತನಿಖೆಗೆ ಸಹಕಾರಿಸುವುದಾಗಿ ಶರಪೋವಾ ತಿಳಿಸಿದ್ದಾರೆ.

ಇಂಥ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದರೆ ಸಾಮಾನ್ಯವಾಗಿ ನಾಲ್ಕು ವರ್ಷಗಳ ನಿಷೇಧ ಹೇರುತ್ತಾರೆ. ಆದರೆ, ವಿಶೇಷ ಸಂದರ್ಭಗಳಲ್ಲಿ ಶಿಕ್ಷೆ ತಗ್ಗುತ್ತದೆ ಎಂದು ಶರಪೋವಾ ಪರ ವಕೀಲ ಜಾಣ್‌ ಹಗ್ಗೆರ್ಟಿ ತಿಳಿಸಿದ್ದಾರೆ.

Write A Comment