ಕರ್ನಾಟಕ

ಸಿಎಂ ಸಾಂತ್ವನ ಹರೀಶ್ ಯೋಜನೆಗೆ ಚಾಲನೆ; ಏನಿದು ಯೋಜನೆ?

Pinterest LinkedIn Tumblr

india-student-protests_510766f8-daf9-11e5-8f04-fd2ff5cc0eae

ಬೆಂಗಳೂರು: ಅಪಘಾತಕ್ಕೊಳಗಾದವರಿಗೆ ಉಚಿತ ತುರ್ತು ಚಿಕಿತ್ಸೆ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ “ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಗೆ”ಗೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ಸಮಾರಂಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಯುಟಿ ಖಾದರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಏನಿದು ಯೋಜನೆ:
ಈ ಯೋಜನೆಯಡಿ ಅಪಘಾತಕ್ಕೊಳಗಾದ ವ್ಯಕ್ತಿ 48 ಗಂಟೆಗಳ ಅವಧಿಯಲ್ಲಿ ಯಾವುದೇ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೂ 25,000 ರೂ. ವರೆಗೆ ಚಿಕಿತ್ಸಾ ನೆರವು ಒದಗಿಸಲಾಗುವುದು. ಹಣ ನಾವು ಕೊಡುವಾಗ ಚಿಕಿತ್ಸೆ ಒದಗಿಸಲು ಯಾವುದೇ ಸರಕಾರಿ/ ಖಾಸಗಿ ಆಸ್ಪತ್ರೆ ನಿರಾಕರಿಸುವಂತಿಲ್ಲ.

ಹರೀಶ್‌ ಸ್ಮರಣಾರ್ಥ ಯೋಜನೆ:
ಕಳೆದ ತಿಂಗಳು ಬೆಂಗಳೂರಿನ ನೆಲಮಂಗಲದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ದೇಹ ಎರಡು ತುಂಡಾಗಿ ಸಾವು ಬದುಕಿನ ಹೊರಾಟದಲ್ಲಿದ್ದರೂ ತನ್ನ ಕಣ್ಣು ಮತ್ತು ಇತರ ಅಂಗಾಂಗಗಳನ್ನು ಹರೀಶ್‌ ನಂಜಪ್ಪ (23) ದಾನ ಮಾಡಿದ್ದ. ಹೀಗಾಗಿ ಹರೀಶ್‌ ಸ್ಮರಣಾರ್ಥ ಈ ಯೋಜನೆಗೆ ಅವರ ಹೆಸರಿನ್ನಿತ್ತು ಮರು ನಾಮಕರಣ ಮಾಡಲಾಗಿದೆ. ಈ ಯೋಜನೆಯಡಿ ಅಪಘಾತಕ್ಕೊಳಗಾದ ವ್ಯಕ್ತಿ 48 ಗಂಟೆಗಳ ಅವಧಿಯಲ್ಲಿ ಯಾವುದೇ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೂ 25,000 ರೂ. ವರೆಗೆ ಚಿಕಿತ್ಸಾ ನೆರವು ಒದಗಿಸಲಾಗುವುದು. ಹಣ ನಾವು ಕೊಡುವಾಗ ಚಿಕಿತ್ಸೆ ಒದಗಿಸಲು ಯಾವುದೇ ಸರಕಾರಿ/ಖಾಸಗಿ ಆಸ್ಪತ್ರೆ ನಿರಾಕರಿಸುವಂತಿಲ್ಲ. ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ಕ್ರಮ ಜರಗಿಸಲಾಗುವುದು ಎಂದು ಆರೋಗ್ಯ ಸಚಿವ ಯುಟಿ ಖಾದರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
-ಉದಯವಾಣಿ

Write A Comment