ಮುಂಬೈ

ನಾಲ್ಕು ತಿಂಗಳ ಮಗುವಿಗೆ 20 ಬಾರಿ ಹೃದಯಾಘಾತ!

Pinterest LinkedIn Tumblr

baby

ಮುಂಬೈ: ನಾಲ್ಕು ತಿಂಗಳ ಹೆಣ್ಣು ಹಸುಗೂಸು 20 ಬಾರಿ ಹೃದಯಾಘಾತಕ್ಕೆ ಒಳಗಾದರೂ ಪವಾಡ ಸದೃಶ ಬದುಕಿ ಉಳಿದು ಈಗ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದಾಳೆ.

ಅದಿತಿ ಜಿಲ್‌ಬಿಲ್ ಹೆಸರಿನ 4 ತಿಂಗಳ ಹೆಣ್ಣು ಮಗು ಎರಡು ತಿಂಗಳ ಅವಧಿಯಲ್ಲಿ 20 ಭಾರಿ ಹೃದಯಾಘಾತಕ್ಕೆ ಒಳಗಾಗಿದ್ದಾಳೆ. ಈಗ ಪೂನಾದ ಆಸ್ಪತ್ರೆಯಲ್ಲಿ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಇನ್ನು ಮಗುವನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಇಟ್ಟಿದ್ದು, ಶೀಘ್ರದಲ್ಲಿಯೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು. ಎಂಟು-ಒಂಭತ್ತು ತಿಂಗಳ ನಂತರ ಈ ಮಗು ಮಾಮೂಲಿ ಜೀವನ ನಡೆಸಲಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.

ಈ ಮಗು ಸೋಲಾಪುರ ಮೂಲದವರದು. ಮಗು ಬೆವರುವುದು, ಎದೆ ಹಾಲು ಕುಡಿಯಲು ನಿರಾಕರಿಸುವುದು ಗಮನಿಸಿದ ತಾಯಿ ಪ್ರೀತಿ, ಸ್ಥಳೀಯ ಆಸ್ಪತ್ರೆಯಲ್ಲಿ ತೋರಿಸಿದ್ದಾರೆ.

ಈ ಮಗುವಿನ ವಿಚಿತ್ರ ಹೃದಯ ಸಂಬಂಧಿತ ನ್ಯೂನತೆ ಇರುವುದನ್ನು ಗಮನಿಸಿದ ವೈದ್ಯರು, ಮಗುವನ್ನು ಪುಣೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದಾರೆ. ಪುಣೆಯಲ್ಲಿಯಲ್ಲಿರುವ ಹೆಚ್.ಎನ್. ರಿಲೆಯನ್ಸ್ ಆಸ್ಪತ್ರೆಯಲ್ಲಿ ಮಗುವನ್ನು ದಾಖಲಿಸಲಾಗಿದೆ. ಫೆಬ್ರವರಿ 22 ರಂದು ಮಗುವಿಗೆ 9 ಗಂಟೆಗಳ ಕಾಲದ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿರುವ ವೈದ್ಯರು ಇನ್ನು ಎರಡು ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾ‌‌ಡುವುದಾಗಿ ಹೇಳಿದ್ದಾರೆ.

ಅಸಹಜ ರಕ್ತ ಸಂಚಾರ

ಮಗು ಅದಿತಿ ಜಿಲ್‌ಬಿಲ್‌ಳ ಹೃದಯಕ್ಕೆ ಆಗುವ ರಕ್ತ ಸಂಚಾರ ಅಸಹಜವಾಗಿತ್ತು. ರಕ್ತ ಹೃದಯಕ್ಕೆ ಹೋಗುವ ಬದಲಿಗೆ ಹೃದಯದಿಂದ ಹೊರ ಭಾಗಕ್ಕೆ ಹೋಗುತ್ತಿದ್ದು, ಹೀಗಾಗಿ ಹೃದಯ ಕ್ರಿಯೆ ಆಗಾಗ ನಿಂತು ಹೋಗುತ್ತಿತ್ತು. ಹೃದಯ ಮಾಂಸಖಂಡಗಳನ್ನು ಇನ್ನು ದುರ್ಬಲಗೊಳಿಸಿತ್ತು ಎಂದು ವೈದ್ಯ ಡಾ. ಶಿವಪ್ರಕಾಶ್ ಹೇಳಿದ್ದಾರೆ.

ಇದು ಅತಿ ಸೂಕ್ಷ್ಮ ಶಸ್ತ್ರ ಚಿಕಿತ್ಸೆ ಅಸಹಜ ಭಾಗಕ್ಕೆ ಹೋಗಿದ್ದ ರಕ್ತನಾಳಗಳನ್ನು ಬೇರ್ಪಡಿಸಿ ಅವು ಇರಬೇಕಾದ ಕಡೆ ಜೋ‌ಡಿಸಲಾಯಿತು ಎಂದು ವೈದ್ಯ ಶಿವಪ್ರಕಾಶ್ ಹೇಳಿದ್ದಾರೆ.

Write A Comment