ಮುಂಬೈ

ಬಿಡಿಯಾಗಿ ಸಿಗರೇಟ್, ಬೀಡಿ ಮಾರಾಟ ಸ್ಥಗಿತಕ್ಕೆ ಸೂಚನೆ

Pinterest LinkedIn Tumblr

cigarate

ಮುಂಬೈ: ಬೀಡಿ, ಸಿಗರೇಟುಗಳನ್ನು ಬಿಡಿ ಬಿಡಿಯಾಗಿ (ಲೂಸ್) ಮಾರಾಟ ಮಾ‌ಡಬಾರದು ಎಂದು ಇವುಗಳ ತಯಾರಿಕಾ ಸಂಸ್ಥೆಗಳಿಗೆ ಕಾನೂನು ಜಾರಿ ಅಧಿಕಾರಿಗಳು ಸೂಚಿಸಿದ್ದಾರೆ.

ಧೂಮಪಾನ ನಿಷೇಧ ಕಾನೂನು ತಿದ್ದುಪಡಿ ಮಾಡಲಾಗಿದ್ದು, ಆ ತಿದ್ದುಪಡಿಯಂತೆ ಬೀಡಿ ಸಿಗರೇಟುಗಳನ್ನು ಬಿಡಿ ಬಿಡಿಯಾಗಿ ಮಾರಾಟ ಮಾಡುವುದರ ಬಗ್ಗೆ ನಿಷೇಧವಿದೆ.

ಈ ತಿದ್ದುಪಡಿ ಕಾನೂನು ಇದೇ ವರ್ಷ ಜನವರಿಯಿಂದ ಜಾರಿಗೆ ಬಂದಿದ್ದು, ಈ ತಕ್ಷಣದಿಂದಲೇ ಬಿಡಿ ಬಿಡಿಯಾಗಿ ಸಿಗರೇಟ್, ಬೀಡಿ ಮಾರಾಟ ಮಾಡುವ ಹಾಗಿಲ್ಲ.

ಬೀಡಿ, ಸಿಗರೇಟ್ ಒಟ್ಟು ಮಾರಾಟದಲ್ಲಿ 3ನೇ 2 ಭಾಗದಷ್ಟು ಸಿಗರೇಟು, ಬೀಡಿ ಬಿಡಿ ಬಿಡಿಯಾಗೇ ಮಾರಾಟವಾಗುತ್ತಿವೆ. ಧೂಮಪಾನ ಕಡಿಮೆ ಗೊಳಿಸುವುದರಲ್ಲಿ ಇಂತಹ ಬಿಡಿ ಮಾರಾಟ ತಡೆ ಪರಿಣಾಮಕಾರಿಯಾಗುತ್ತದೆ.

ಹಾಗೆಯೇ ಧೂಮಪಾನ ಮಾಡುವವರಲ್ಲಿ ಹೆಚ್ಚಿನ ಮಂದಿ ಬಿಡಿಯಾಗೆ ಸಿಗರೇಟ್‌ಕೊಂಡು ಸೇದುವವರಿದ್ದಾರೆ.ಧೂಮಪಾನ ನಿಷೇಧಕ್ಕೆ ಸರಕಾರದ ಹಲವು ಕ್ರಮಗಳಲ್ಲಿ ಇವುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದೂ ಆಗಿದೆ. 2016-17ನೇ ಮುಂಗಡ ಪತ್ರದಲ್ಲಿ ಈ ಬಾಬತ್ತಿನಲ್ಲಿ ತೆರಿಗೆ ಏರಿಕೆ ಮಾಡಲಾಗಿದೆ.

Write A Comment