ಮುಂಬೈ

ಬಡವರಿಗೆ ವರದಾನ: 120ರೂ.ಗೆ ಸ್ತನ ಕ್ಯಾನ್ಸರ್ ಔಷಧಿ!

Pinterest LinkedIn Tumblr

brest cancer

ಮುಂಬೈ: ಮಧುಮೇಹ ಮತ್ತು ಕ್ಯಾನ್ಸರ್ ಬಂದಿತೆಂದರೆ ಔಷಧಿ ಬೆಲೆ ನೆನೆದು ಬೆಚ್ಚಿಬೀಳುತ್ತಾರೆ. ಆದರೆ ಇಲ್ಲೊಂದು ಶುಭ, ಹಿತ-ಮಿತ ಖರ್ಚಿನ ಶುಭಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ ಕೇವಲ 120 ರೂ.ಗೆ ಈ ಕಾಯಿಲೆಗಳಿಗೆ ತಿಂಗಳಿಗಾಗುವಷ್ಟು ಔಷಧಿ ಸಿಗುತ್ತದೆ.

ಸ್ತನ ಕ್ಯಾನ್ಸರ್ ಪೀಡಿತರಿಗೆ 120 ರೂ.ಗಳ ಔಷಧಿ ವರವಾಗಿ ಪರಿಣಮಿಸಿದೆ. ಟಾಟಾ ಮೆಮೋರಿಯಲ್ ಆಸ್ಪತ್ರೆ ನಡೆಸಿದ ಉನ್ನತ ಮಟ್ಟದ ಸಮೀಕ್ಷೆಯಲ್ಲಿ ಶೇ. 40ರಷ್ಟು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಟಾಟಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಸ್ಥನ ಕ್ಯಾನ್ಸರ್ ಪೀಡಿತರಲ್ಲಿ ಶೇ.90ರಷ್ಟು ಮಂದಿ ಚುಚ್ಚು ಮದ್ದು ಪಡೆಯುತ್ತಿದ್ದು, ಇವರಲ್ಲಿ ಶೇ.50ರಷ್ಟು ಮಂದಿ ಈ ಔಷಧಿ ಸೇವನೆ ಅತ್ಯುಪಯುಕ್ತವಾದದ್ದೆಂದು ಅಭಿಪ್ರಾಯಪಡುತ್ತಾರೆ.

ಕ್ಯಾನ್ಸರ್ ಮತ್ತು ಮದುಮೇಹಕ್ಕೆ ಇಷ್ಟೊಂದು ಅಗ್ಗದ ದರದ ಔಷಧಿ ಸಿಕ್ಕುವುದು ದೆಶದ ಆರ್ಥಿಕ ದೃಷ್ಟಿಯಿಮದ ಒಳ್ಳೆಯ ಬೆಳವಣಿಗೆಯೇ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸೆ, ಇಂಜೆಕ್ಷನ್ ಮತ್ತು ಗುಳಿಗೆ ನುಂಗುವಂತಹ ಮೂರು ವಿಧಗಳಿದ್ದು, ಈ ಮಾತ್ರೆಗಳು ಕಡಿಮೆ ಡೋಸ್ ಹೊಂದಿರುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಸಹ ಬೀರುವುದಿಲ್ಲ ಎಂದು ಟಾಟಾ ಅಸ್ಪತ್ರೆಯ ಮೆಟ್ರೋನಾಮಿಕ್ ಥೆರಪಿ ವಿಭಾಗದ ಡಾ.ಶ್ರೀಪಾದ್ ಬನವಲಿ ಅಭಿಪ್ರಾಯಪಡುತ್ತಾರೆ.

ಸ್ತನ ಕ್ಯಾನ್ಸರ್‍ಗೆ ಹಲವು ವರ್ಷಗಳಿಂದ ಬಳಸುತ್ತಿದ್ದ ಶಸ್ತ್ರಚಿಕಿತ್ಸೆ, ಕೀಮೋಥೆರಪಿ, ರೇಡಿಯೋ ಥೆರಪಿ ವಿಫಲವಾಗಿರುವುದರಿಂದ ಅಗ್ಗದ ಬೆಲೆಯ ಗುಣಮಟ್ಟದ ಈ ಔಷಧಿ ಮಹತ್ವ ಪಡೆದುಕೊಳ್ಳುತ್ತದೆ. 20 ಸಾವಿರ ಅಮೆರಿಕನ್ ಡಾಲರ್ ಖರ್ಚು ಮಾಡುವ ಕಡೆ 2 ಡಲರ್‍ಗೆ ಚಿಕಿತ್ಸೆ ಸಿಕ್ಕುತ್ತದೆ ಎಂದರೆ ಇದೊಂದು ಉತ್ತಮ ಬೆಳವಣಿಗೆಯೇ ಸರಿ ಎಂದು ಅವರು ಹೇಳುತ್ತಾರೆ.

ಜಗತ್ತಿನಲ್ಲಿ ಕ್ಯಾನ್ಸರ್ ನಿಯಂತ್ರಣಕ್ಕೆ ಇಮ್ಯೂನೋಥೆರಪಿ ಚಿಕಿತ್ಸೆ ನೀಡುತ್ತಿದ್ದು, ಅದಕ್ಕೆ 20 ಸಾವಿರ ಅಮೆರಿಕನ್ ಡಾಲರ್ ಖರ್ಚಾಗುತ್ತದೆ. ಆದರೆ 2 ಡಾಲರ್‍ಗೆ ಅಬಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಅದೇ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿರುವುದು ಸಂತಸದ ವಿಷಯವೇ ಸರಿ. ನಗರದ ಇತರೆ ಆಸ್ಪತ್ರೆಗಳೂ ಈಗ ಈ ಪರಿಣಾಮಕಾರಿ ಔಷಧಿ ಬಳಕೆಯತ್ತ ಗಮನಹರಿಸುತ್ತಿವೆ ಎಂದು ಅವರು ತಿಳಿಸುತ್ತಾರೆ.

Write A Comment