ಮುಂಬೈ

ಬಹುಶಃ ಮೊಹಮ್ಮದ್ ರಫಿ ಮುಸ್ಲಿಂ ಎಂಬ ಕಾರಣಕ್ಕೆ ಭಾರತ ರತ್ನ ನೀಡಿಲ್ಲ: ರಫಿ ಪುತ್ರ

Pinterest LinkedIn Tumblr

MohammedRafiಮುಂಬೈ: ಬಹುಶಃ ಖ್ಯಾತ ಗಾಯಕ ಮೊಹಮ್ಮದ್ ರಫಿ ಅವರು ಮುಸ್ಲಿಂ ಎಂಬ ಕಾರಣಕ್ಕೆ ಅವರಿಗೆ ಭಾರತ ರತ್ನ ನೀಡಿಲ್ಲವೆಂದೆನಿಸುತ್ತದೆ ಎಂದು ಮೊಹಮ್ಮದ್ ರಫಿ ಪುತ್ರ ಶಾಹಿದ್ ರಫಿ ಹೇಳಿದ್ದಾರೆ.

ನಾನು ಪ್ರಧಾನಿ ವಿರುದ್ಧ ಯಾವುದೇ ರೀತಿಯಲ್ಲಿ ವಾಗ್ದಾಳಿ ನಡೆಸಿಲ್ಲ. ನನ್ನ ಒತ್ತಾಯವೆಂದರೆ, ನನ್ನ ತಂದೆ ಪ್ರಸಿದ್ಧ ಗಾಯಕ. ದೇಶದ ಜನತೆ ಅವರ ಹಾಡನ್ನು ಮೆಚ್ಚಿದ್ದಾರೆ. ಅವರ ಸಾಧನೆಗೆ ಮೆಚ್ಚಿ ಭಾರತ ರತ್ನ ನೀಡಬೇಕು. ಇದು ನನ್ನ ತಂದೆಯ ಆಶಯವಲ್ಲ. ಇದು ಅವರ ಅಭಿಮಾನಿಗಳ ಒತ್ತಾಯ ಎಂದು ಅವರು ಹೇಳಿದ್ದಾರೆ.

ನಮ್ಮ ತಂದೆ ಜಾತ್ಯತೀತ ವ್ಯಕ್ತಿ. ಅವರು ಸಾಕಷ್ಟು ಭಜನೆ ಗೀತೆಗಳನ್ನೂ ಹಾಡಿದ್ದಾರೆ. ಹಾಗಾಗಿ, ಕೇಂದ್ರ ಸರ್ಕಾರ ಭಾರತ ರತ್ನ ನೀಡುವುದರ ಬಗ್ಗೆ ಚಿಂತಿಸಬೇಕಿದೆ ಎಂದು ಅವರು, ಬಹುಶಃ ನಮ್ಮ ತಂದೆ ಮುಸ್ಲಿಂ ಎಂಬ ಕಾರಣಕ್ಕೆ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲ್ಲವೆಂದೆನಿಸುತ್ತದೆ ಎಂದು ಹೇಳಿದ್ದೆ ಹೊರತು, ಮೋದಿ ವಿರುದ್ಧ ವಾಗ್ದಾಳಿ ನಡೆಸಿಲ್ಲ. ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Write A Comment