ಮುಂಬೈ

101 ವರ್ಷದ ತಾಯಿಯನ್ನೇ ಚೈನ್​ನಿಂದ ಕಟ್ಟಿಹಾಕಿದ ಮಗರಾಯ!

Pinterest LinkedIn Tumblr

motherಮುಂಬೈ: ಬೆಚ್ಚಿ ಬೀಳಿಸುವ ಪ್ರಕರಣ ಇದು. ಈ ವಿಡಿಯೋ ತುಣುಕನ್ನು ನೋಡಿದಾಗ, ಹೆತ್ತ ತಾಯಿಯನ್ನು ಈ ಪರಿಯಾಗಿ ಶಿಕ್ಷಿಸುವ ಮಕ್ಕಳೂ ಇದ್ದಾರೆಯೇ ಅನಿಸುವುದರಲ್ಲಿ ಅನುಮಾನವೇ ಇಲ್ಲ.

ಹೌದು, ಮಹಾರಾಷ್ಟ್ರದ ಬುಲ್ಡಾಣ ಎನ್ನುವಲ್ಲಿ ವ್ಯಕ್ತಿಯೊಬ್ಬ 101 ವರ್ಷ ವಯಸ್ಸಿನ ತನ್ನ ತಾಯಿಯನ್ನು ಚೈನ್​ನಲ್ಲಿ ಕಟ್ಟಿಹಾಕಿ ನರಕಯಾತನೆ ಅನುಭವಿಸುವಂತೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸ್ಥಳೀಯರ ಮಾಹಿತಿಯಂತೆ ಮಗರಾಯ ಕಳೆದ ಏಳೆಂಟು ವರ್ಷಗಳಿಂದ ತಾಯಿಯ ಕಾಲನ್ನು ಚೈನ್​ನಿಂದ ಕಟ್ಟಿಹಾಕಿರುತ್ತಿದ್ದ ಎನ್ನಲಾಗಿದೆ. ಮನಕಲಕುವ ಈ ಮಾಹಿತಿಯನ್ನು ಕಲೆಹಾಕಿದ ಪೊಲೀಸರು ದಾಳಿ ನಡೆಸಿ ಮಗರಾಯನನ್ನು ಬಂಧಿಸಿದಾಗಲೇ ಸಾರ್ವಜನಿಕರಿಗೆ ಆತ ಕ್ರೂರತನ ಬಯಲಾಗಿದೆ.

ತಾಯಿಯನ್ನು ಬಂಧಮುಕ್ತಗೊಳಿಸಿದ ಪೊಲೀಸರು ಈ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Write A Comment