ಮುಂಬೈ

ರೈಲು ಹರಿದು ನಾಲ್ವರು ಗ್ಯಾಂಗ್‌ಮನ್‌ರು‌ ಸಾವು

Pinterest LinkedIn Tumblr

Trackಮುಂಬೈ : ಉಪನಗರ ರೈಲು ಹರಿದು ರೈಲ್ವೆಯ ನಾಲ್ವರು ಗ್ಯಾಂಗ್‌ಮನ್‌ಗಳು ಮೃತಪಟ್ಟಿರುವ ಘಟನೆ ಶುಕ್ರವಾರ ಮುಂಬೈನಲ್ಲಿ ನಡೆದಿದೆ.

ಮುಂಜಾನೆ 6:15ರಿಂದ 6:30ರ ನಡುವಣ ಸಮಯದಲ್ಲಿ ಉಪನಗರ ಕುರ್ಲಾ ಹಾಗೂ ವಿದ್ಯಾವಿಹಾರ ನಿಲ್ದಾಣಗಳ ನಡುವೆ ಈ ದುರ್ಘಟನೆ ಸಂಭವಿಸಿದೆ. ಅವಘಡದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯ ಹಿಂದಿನ ಕಾರಣ ಪತ್ತೆಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾರ್ಮಿಕರು ಕುರ್ಲಾ ಹಾಗೂ ವಿದ್ಯಾವಿಹಾರ್ ನಿಲ್ದಾಣಗಳ ನಡುವಣ ರೈಲ್ವೆ ಕಂಬಿಗಳುದ್ದಕ್ಕೂ ನಡೆದು ಹೋಗುತ್ತಿದ್ದ ವೇಳೆ  ಘಟನೆ ನಡೆದಿದೆ. ಕರ್ಜತ್‌–ಸಿಎಸ್‌ಟಿ ಸ್ಥಳೀಯ ರೈಲಿಗೆ ಅವರು ಸಿಲುಕಿದ್ದಾರೆ ಎಂದು ಸೆಂಟ್ರಲ್‌ ರೈಲ್ವೆ ವಿಭಾಗದ ರೈಲ್ವೆ ಪೊಲೀಸ್ ಉಪಆಯುಕ್ತರಾದ ರೂಪಾಲಿ ಅಂಬುರೆ ಹೇಳಿದ್ದಾರೆ.

‘ಕತ್ತಲೆ ಇತ್ತಾದರಿಂದ ಟ್ರ್ಯಾಕ್‌ಮನ್‌ಗಳು ರೈಲು ಬರುವುದನ್ನು ಗಮನಿಸದೇ ಇರಬಹುದು’ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

Write A Comment