ಕರ್ನಾಟಕ

ಜೆಎನ್​ಯುು ಘಟನೆ ವಿರುದ್ಧ ಎಬಿವಿಪಿ ಮೆರವಣಿಗೆ

Pinterest LinkedIn Tumblr

jnu-finalಬೆಂಗಳೂರು: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ದೇಶ ವಿರೋಧಿ ಕಾರ್ಯಕ್ರಮ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

200 ಅಡಿ ಉದ್ದದ ತ್ರಿವರ್ಣ ಧ್ವಜ ಹಿಡಿದ ವಿದ್ಯಾರ್ಥಿಗಳು ಎಸ್​ಜೆಪಿ ಕಾಲೇಜಿನಿಂದ ಆನಂದರಾವ್ ವೃತ್ತದವರೆಗೆ ರ‍್ಯಾಲಿ ನಡೆಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದರೆ, ದೇಶದ್ರೋಹಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ನೆಪದಲ್ಲಿ ಉಗ್ರ

ಅಫ್ಜ್ಜ್ಗುರು ಪರ ಘೊಷಣೆ ಕೂಗಿದ ಜೆಎನ್​ಯುು ವಿದ್ಯಾರ್ಥಿಗಳ ವರ್ತನೆ ರಾಷ್ಟ್ರದ ಏಕತೆಗೆ ಧಕ್ಕೆ ಉಂಟು ಮಾಡಿದೆ. ಯೋಧರು ವೀರಮರಣ ಹೊಂದಿದ ಶೋಕದಲ್ಲಿ ಇರುವಾಗ ದೇಶವಿರೋಧಿ ಚಟುವಟಿಕೆ ನಡೆಸಿದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದರು.

ಜೆಎನ್​ಯುು, ಟಿಐಎಸ್​ಎಸ್ ಮತ್ತು ಹೈದರಾಬಾದ್ ವಿವಿಗಳಲ್ಲಿ ಉಗ್ರ ಹಾಗೂ ನಕ್ಸಲ್ ವಾದವನ್ನು ಬೆಂಬಲಿಸುತ್ತಿರುವ ಘಟನೆಗಳು ಪದೇಪದೆ ನಡೆಯುತ್ತಿವೆ. ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸಬೇಕಾದ ವಿವಿ ಆವರಣದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿರುವುದು ಆತಂಕಕಾರಿ ಸಂಗತಿ ಎಂದರು.

ಸಂತೋಷ್ ರೆಡ್ಡಿ, ಅಶ್ವಿನಿ, ರಾಧಿಕಾ, ಶ್ರೀ ಜಯಪ್ರಕಾಶ್, ಪ್ರಶಾಂತ್ ಸೇರಿ ಹಲವು ಮುಖಂಡರು ರ್ಯಾಲಿಯ ನೇತೃತ್ವ ವಹಿಸಿದ್ದರು.

Write A Comment