ಮುಂಬೈ

ಮುಂಬೈನಲ್ಲಿ ಆಟೋ ರಿಕ್ಷಾ ಓಡಿಸಲು 600 ಮಹಿಳೆಯರಿಗೆ ಪರವಾನಗಿ

Pinterest LinkedIn Tumblr

autoಮುಂಬೈ, ಜ.16-ಮಹಾರಾಷ್ಟ್ರದಲ್ಲಿ ಇದೇ ಮೊದಲ ಬಾರಿಗೆ ಮುಂಬೈ ಮಹಾನಗರದಲ್ಲಿ ತ್ರಿಚಕ್ರ ವಾಜಹನ (ಆಟೋರಿಕ್ಷಾ) ಓಡಿಸಲು ಸುಮಾರು 600 ಮಹಿಳೆಯರು ಪರವಾನಗಿ ಪಡೆದಿದ್ದಾರೆ. ಮಹಿಳೆಯರನ್ನು ಪ್ರೋತ್ಸಾಹಿಸುವ ಸಲುವಾಗಿ ಲಾಟರಿ ಮೂಲಕ ಈ ಪರವಾನಗಿಗಳನ್ನು ನೀಡಲಾಗಿದ್ದು, ಮುಂಬೈ ಮಹಾನಗರದ  ವ್ಯಾಪ್ತಿಯ ಸುಮಾರು 500 ಮಂದಿ ಹಾಗೂ ಇತರೆಡೆಗಳ 100ಕ್ಕೂ ಹೆಚ್ಚು ಮಹಿಳೆಯರು ಈಗ ಅಧಿಕೃತ ಪರವಾನಗಿ ಪಡೆದ ಆಟೋ ಚಾಲಕಿಯರಾಗಿದ್ದಾರೆ.

ಈ ವಾರಾಂತ್ಯಕ್ಕೆ ಇವರೆಲ್ಲರಿಗೂ ಪರವಾನಗಿಗಳನ್ನು ವಿವರಿಸಲಾಗುವುದು  ಮತ್ತು ಇನ್ನೊಂದೆರಡು ತಿಂಗಳಲ್ಲಿ ಇವರೆಲ್ಲರೂ ತಮ್ಮ ತ್ರಿಚಕ್ರ ವಾಹನಗಳೊಂದಿಗೆ ಮುಂಬೈ ಬೀದಿಗಿಳಿಯಲಿದ್ದಾರೆ ಎಂದು ವಿಭಾಗೀಯ ಸಾರಿಗೆ ಅಧಿಕಾರಿ ರಾಜೇಂದ್ರ ನವಲೆ ಹೇಳಿದ್ದಾರೆ.

ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಈ ಕ್ರಮ ಅನುಸರಿಸಲಾಗಿದೆ. ವಿದೇಶಗಳಲ್ಲಿ ಮಹಿಳೆಯರು ಟ್ಯಾಕ್ಸಿಗಳನ್ನು ಓಡಿಸುತ್ತಾರೆ. ಇಲ್ಲಿಯೂ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಆಗಬೇಕಾಗಿದೆ ಎನ್ನುತ್ತಾರೆ ನವಲೆ. ಮಹಿಳಾ ಆಟೋ ಚಾಲಕರು ಹೆಚ್ಚಿದರೆ ಮಹಿಳೆಯರ ಸುರಕ್ಷತೆಗೂ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

Write A Comment