ತಮಿಳಿನ ಖ್ಯಾತ ನಟಿ ಕೌಸಲ್ಯಾ ಕನ್ನಡದಲ್ಲೂ ಒಂದಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಈಗ ಕಿರುತೆರೆಯ ಮೂಲಕ ಕನ್ನಡಕ್ಕೆ ರೀ ಎಂಟ್ರಿ ಕೊಡೋಕೆ ತಯಾರಿ ನಡೆಸಿದ್ದಾರೆ.
ಫಬ್ರವರಿ 1ರಿಂದ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಹೊಸ ಧಾರಾವಾಹಿ ‘ಅಮ್ಮ’ ಮೂಲಕ ತಮಿಳಿನ ಈ ಖ್ಯಾತ ನಟಿ ಕನ್ನಡದ ಕಿರುತೆರೆಗೆ ಅಡಿ ಇಡ್ತಿದ್ದಾರೆ. ಈ ಧಾರಾವಾಹಿಯ ನಿರ್ಮಾಪಕ ಗುರುರಾಜ್ ಈ ಹಿಂದೆ ‘ಖುಷಿ’ ಎನ್ನುವ ಧಾರಾವಾಹಿಯನ್ನು ನಿರ್ಮಿಸಿ ಅನುಭವ ಇರುವವರು.
ಸುಖೇಶ್ ರಾವ್ ನಿರ್ದೇಶನದ ಈ ಧಾರಾವಾಹಿಯ ಮೂಲಕ ಅನೇಕ ಹೊಸ ಮುಖಗಳ ಪರಿಚಯವಾಗಲಿದೆ. ಪ್ರತಿ ದಿನ ರಾತ್ರಿ 8.30ಕ್ಕೆ ‘ಅಮ್ಮ’ ನಿಮ್ಮ ಮನೆಗೆ ಬರೋಕೆ ಸಜ್ಜಾಗ್ತಿದ್ದಾಳೆ.
1 Comment
Kannada da natiyaru satthog iddaaraa