ಮುಂಬೈ, ಜ.16-ನಮ್ಮ ಪಕ್ಷ ಮುಂದಿಟ್ಟಿರುವ ಷರತ್ತುಗಳನ್ನು ಸರ್ಕಾರ ಪೂರ್ಣಗೊಳಿಸಿದರೆ ಕೇವಲ 15ನಿಮಿಷಗಳಲ್ಲಿ ಕೇಂದ್ರ್ದ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಮಸೂದೆಯನ್ನು ಸಂಸತ್ತಿನಲ್ಲಿ ಅನುಮೋದಿಸಲು ನಾವು ಸಿದ್ಧ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಹೇಳಿದ್ದಾರೆ.
ಸರ್ಕಾರ ನಮ್ಮೊಂದಿಗೆ ಕುಳಿತು ಚರ್ಚಿಸಿದರೆ ಜೆಎಸ್‌ಟಿ ವಿಧೇಯಕ ಅನುಮೋದನೆಗೆ ದೊಡ್ಡ ಕಷ್ಟವೇನೂ ಆಗುವುದಿಲ್ಲ. ಆದರೆ ಸರ್ಕಾರ ಆ ಕೆಲಸ ಮಾಡುತ್ತಿಲ್ಲ ಎಂದು ರಾಹುಲ್ ತಿಳಿಸಿದ್ದಾರೆ. ನಮ್ಮ ಪಕ್ಷದಕಡಯಿಂದ ವಿಧಿಸಿರುವ ಷರತ್ತುಗಳನ್ನು ಸರ್ಕಾರ ಒಪ್ಪಿಕೊಳ್ಳಬೇಕು. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಖಂಡಿತಾ ಜಿಎಸ್‌ಟಿ ಮಸೂದೆ ಅನುಮೋದನೆಗೊಳ್ಳುತ್ತದೆ. ಅದಕ್ಕೆ ಬೇಕಾಗಿರುವುದು ಪರಸ್ಪರ ಒಪ್ಪಿಗೆ.
ಅದೇನೂ ದೊಡ್ಡದಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಮುಂದುವರಿಯಬೇಕಷ್ಟೆ ಎಂದು ರಾಹುಲ್ ಹೇಳಿದ್ದಾರೆ. ನೂರಾರು ವಿದ್ಯಾರ್ಥಿಗಳ ಜೊತೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್, ಈ ಹಿಂದೆ ಜಿಎಸ್‌ಟಿ ಮಸೂದೆ ಮಾಡಿಸಿದ್ದು ಕಾಂಗ್ರೆಸ್ ಆಗ ಬಿಜೆಪಿ ನಾಯಕ ಅರುಣ್ ಜೈಟ್ಲಿ ಅದನ್ನು 7ವರ್ಷಗಳ ಕಾಲ ತಡೆಹಿಡಿದರು. ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇದ್ರಮೋದಿ ಅವರೂ ಕೂಡ ಜಿಎಸ್‌ಟಿ ಮಸೂದೆ ಅನುಮೋದನೆಗೆ ಅವಕಾಶ ನೀಡಲಿಲ್ಲ ಎಂದು ಹೇಳಿದರು.