ಸುಮನಾ ಕಿತ್ತೂರು ನಿರ್ದೇಶನದ ‘ಕಿರಗೂರಿನ ಗಯ್ಯಾಳಿಗಳು’ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಚಿತ್ರದ ಮುಕ್ಕಾಲು ಕೆಲಸ ಈಗಾಗ್ಲೇ ಮುಗಿದಿದ್ದು ಫೆಬ್ರವರಿಯಲ್ಲಿ ಚಿತ್ರ ತೆರೆಗೆ ಬರೋದಕ್ಕೆ ರೆಡಿಯಾಗುತ್ತಿದೆ.
ಪೂರ್ಣಚಂದ್ರ ತೇಜಸ್ವಿಯವರ ಜನಪ್ರಿಯ ಕೃತಿಯನ್ನು ತೆರೆ ಮೇಲೆ ತವರುವುದರಲ್ಲಿ ಸುಮನಾ ಕಿತ್ತೂರು ಯಶಸ್ವಿಯಾಗಿದ್ದಾರೆ ಅಂತಿದೆ ಚಿತ್ರತಂಡ.
ಶ್ವೇತಾ ಶ್ರೀವಾಸ್ತವ್, ಅಚ್ಯುತರಾವ್, ಲೂಸ್ ಮಾದ ಯೋಗಿ, ಪ್ರಕಾಶ್ ಬೆಳವಾಡಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಗಯ್ಯಾಳಿಗಳ ಚಿತ್ರಗಳು ಈಗಾಗ್ಲೇ ಸಾಕಷ್ಟು ಟಾಕ್ ಕ್ರಿಯೇಟ್ ಮಾಡಿವೆ.
ಫೆಬ್ರವರಿಯಲ್ಲಿ ಚಿತ್ರ ತೆರೆ ಕಾಣೋಕೆ ಸಜ್ಜಾಗಿದೆ. ಅಂತೂ ಒಂದೊಳ್ಳೆ ಚಿತ್ರ ನೋಡೋಕೆ ಸಿನಿರಸಿಕರಂತೂ ಕಾಯ್ತಾ ಇದ್ದಾರೆ.