ಮುಂಬೈ

ರಾಷ್ಟ್ರೀಯ ಮಾನವ ಹಕ್ಕು ಆಯೋಗದ ರಾಷ್ಟ್ರೀಯ ಅಧ್ಯಕ್ಷ ಶಂಕರ ವಿ. ಶೆಟ್ಟಿ ನಿಧನ

Pinterest LinkedIn Tumblr

shankar shetty

ಮುಂಬಯಿ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ರಾಷ್ಟ್ರೀಯ ಅಧ್ಯಕ್ಷ ಶಂಕರ ವಿಠಲ್ ಶೆಟ್ಟಿ (64) ಇವರು ಅಲ್ಪ ಕಾಲದ ಅನಾರೋಗ್ಯದಿಂದಾಗಿ ಡಿ. 4 ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂದಿದರು.

ಗೋರೆಗಾಂವ್ ಪಶ್ಚಿಮ, ಸಿದ್ದಾರ್ಥ್ ನಗರದ ನಿವಾಸಿಯಾದ ಇವರು ಮೂಲತ: ಕಾರ್ಕಳದ ಮೂಜೂರು ಬಾನಡ್ಕದ ಹಿರ್ಗಾದವರು.

ಕಳೆದ ಸುಮಾರು 18 ವರ್ಷಗಳಿಂದ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ರಾಷ್ಟ್ರೀಯ ಸ್ಥಾಪಕ ಅಧ್ಯಕ್ಷ ರಾಗಿ ದುಡಿಯುತ್ತಿದ್ದ ಇವರು ನಿಸ್ವಾರ್ಥವಾಗಿ ಜನಸಾಮಾನ್ಯರ ೊೊೊ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಮೂಲಕ ಈಗಾಗಲೇ ಜನಸಾಮಾನ್ಯರಿಗೆ ಅನೇಕರಿಗೆ ನ್ಯಾಯವನ್ನು ಒದಗಿಸುವಲ್ಲಿ ದುಡಿಯುತ್ತಿದ್ದ ಶಂಕರ ವಿ. ಶೆಟ್ಟಿ ಯವರ ಅಕಾಲ ಅಗಲಿಕೆಯಿಂದ ಆಯೋಗಕ್ಕೆ ಮಾತ್ರವಲ್ಲದೆ ಜನಸಾಮಾನ್ಯರಿರು ತುಂಬಾ ನಷ್ಟ ವಾಗಿದ್ದು ಆಯೋಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Write A Comment