ಕರ್ನಾಟಕ

ರಾಯಚೂರಿನಲ್ಲಿ ನವಜಾತ ಶಿಶುಗಳನ್ನು ಕಚ್ಚಾಡಿಕೊಂಡು ತಿಂದ ನಾಯಿ-ಹಂದಿಗಳು

Pinterest LinkedIn Tumblr

do

ರಾಯಚೂರು: ರಿಮ್ಸ್ ಆಸ್ಪತ್ರೆ ಆವರಣ ಸೇರಿ ಎರಡು ಕಡೆಗಳಲ್ಲಿ ನವಜಾತ ಶಿಶುಗಳನ್ನು ನಾಯಿಗಳು ಮತ್ತು ಹಂದಿಗಳು ಹರಿದು ತಿಂದ ಹೃದಯವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.

ರಿಮ್ಸ್ ಆಸ್ಪತ್ರೆಯಲ್ಲೆ ಜನಿಸಿದ ಹೆಣ್ಣು ಶಿಶುವನ್ನು ನಾಯಿಗಳು ತಿಂದು ಆಸ್ಪತ್ರೆಯ ಮುಂದೆಯೇ ತಂದು ಹಾಕಿವೆ. ಹೆರಿಗೆ ವೇಳೆ ಸಾವನ್ನಪ್ಪಿದ ಮಗವನ್ನು ಆಸ್ಪತ್ರೆ ಹಿಂಭಾಗದ ಜಾಗದಲ್ಲಿ ಮಣ್ಣು ಮಾಡಲಾಗಿತ್ತು. ಆದರೆ ನಾಯಿಗಳು ಎಳೆದು ತಂದಿವೆ ಎಂದು ರಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ್ ತಿಳಿಸಿದ್ದಾರೆ. ಬಳಿಕ ಸಿಬ್ಬಂದಿಯೇ ತಮ್ಮ ತಪ್ಪಿನ ಅರಿವಾಗಿ ಪುನಃ ಅಂತ್ಯಸಂಸ್ಕಾರ ಮಾಡಿದ್ದಾರೆ.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಚರಂಡಿ ಬಳಿ ಇನ್ನೊಂದು ನವಜಾತ ಶಿಶು ಪತ್ತೆಯಾಗಿದೆ. ನಾಯಿಗಳು ಶಿಶುವಿನ ಕೈ ಕಾಲುಗಳನ್ನು ತಿಂದು ಹಾಕಿದ್ದು ಕೊಳೆತ ಸ್ಥಿತಿಯಲ್ಲಿದೆ. ಹೆರಿಗೆ ಬಳಿಕ ಮಗುವನ್ನು ತಾಯಿ ಎಸೆದು ಹೋಗಿರಬಹುದು ಎಂದು ಸಾರ್ವಜನಿಕರು ಅನುಮಾನಿಸಿದ್ದಾರೆ.

ಆಗಾಗ ಈ ಚರಂಡಿಯಲ್ಲಿ ನವಜಾತ ಶಿಶುಗಳ ಶವಗಳು ಕಾಣಿಸಿಕೊಳ್ಳುತ್ತಿದ್ದು ರಿಮ್ಸ್ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಜನಿಸಿದ ಶಿಶುಗಳು ಎನ್ನಲಾಗುತ್ತಿದೆ. ಪ್ರತ್ಯೇಕ ಎರಡು ಘಟನೆಗಳು ನಗರದ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿವೆ.

Write A Comment