ಮುಂಬೈ

ನೀನು ನನ್ನ ಖುಷಿ ಬಗ್ಗೆಯೂ ಯೋಚನೆ ಮಾಡಬೇಕು: ಇಂದ್ರಾಣಿಗೆ ಶೀನಾ ಮೇಲ್

Pinterest LinkedIn Tumblr

sheena-31ಮುಂಬೈ: ತನ್ನ ಮಲ ಸಹೋದರನೊಂದಿಗೆ ಸಂಬಂಧ ಹೊಂದಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದಲ್ಲಿ ಬಿರುಕುಂಟಾದಾಗ ಶೀನಾ ಬೋರಾ ತನ್ನ ತಾಯಿ ಇಂದ್ರಾಣಿ ಮುಖರ್ಜಿಗೆ ಇಮೇಲ್ ಮೂಲಕ ತನ್ನ ನಿರ್ಧಾರಕ್ಕೆ ಅಡ್ಡಪಡಿಸಬೇಡ ಎಂದು ಕೇಳಿಕೊಂಡಿದ್ದಾಳೆ.

ಶೀನಾ ಬೋರಾ ಇಮೇಲ್‌ನಲ್ಲಿ ಬರೆದ ವಿಷಯವನ್ನು ಸಿಬಿಐ ತಾನು ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ವಿವರಿಸಿದ್ದು, ನಾನು ರಾಹುಲ್‌ನೊಂದಿಗೆ ತುಂಬಾ ಸಂತೋಷವಾಗಿ ಮತ್ತು ಸುರಕ್ಷಿತವಾಗಿ ಇದ್ದೇನೆ. ಇದು ಪೋಷಕರಿಗೆ ಮುಖ್ಯವಲ್ಲವೇ? ನೀನು ನನ್ನ ಖುಷಿಯ ಬಗ್ಗೆಯೂ ಯೋಚನೆ ಮಾಡಬೇಕು ಎಂದು ಹೇಳಿದ್ದಾಳೆ.

‘ಜೀವನದಲ್ಲಿ ನಿನಗೆ ಅನಿಸಿದ್ದನ್ನು ನೀನು ಮಾಡಿದ್ದೀಯಾ… ಈಗ ನಾನು ಅದನ್ನೇ ಮಾಡುತ್ತಿದ್ದೇನೆ. ಈ ಬಗ್ಗೆ ನೀನಗೆ ಏಕೆ ಅಸಮಾಧಾನ? ನಾನು ನಿನ್ನ ಮಗಳು. ಹೀಗಾಗಿ ನನ್ನಲ್ಲೂ ನಿನ್ನ ಕೆಲವು ಗುಣಗಳು ಇವೆ. ನನ್ನ ದಾರಿ ನಾನು ಕಂಡುಕೊಳ್ಳುತ್ತೇನೆ. ನೀವು ಚೆನ್ನಾಗಿರಿ’ ಎಂದು ಶೀನಾ ಬರೆದಿದ್ದಾಳೆ.

ರಾಹುಲ್ ಮುಖರ್ಜಿಯೊಂದಿಗಿನ ಸಂಬಂಧ ಕಡಿದುಕೊಳ್ಳುವಂತೆ ಆಕೆ ಮೇಲೆ ಒತ್ತಡ ಹಾಕಿದಾಗ ಶೀನಾ ಬೋರಾ ಈ ರೀತಿ ಮೇಲ್ ಮಾಡಿದ್ದಾಳೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

Write A Comment