ಮುಂಬೈ

ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿ: ಉದ್ಧವ್ ಠಾಕ್ರೆ

Pinterest LinkedIn Tumblr

uddavtakrayಮುಂಬೈ: ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕೆಂದು ಮುಂಬೈ ಬಲಪಂಥೀಯ ಸಂಘಟನೆ ಶಿವಸೇನೆಯ ಮುಖಂಡ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಮುಂಬೈ ಶಿವಾಜಿ ಪಾರ್ಕಿನಲ್ಲಿ ದಸರಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಗೋಮಾಂಸವನ್ನು ನಿಷೇಧಿಸಿದ್ದಾರೆ. ಆದರೆ ಅದಕ್ಕೂ ಮುನ್ನ ಭಾರತವನ್ನು ಹಿಂದೂ ದೇಶವವೆಂದು ಘೋಷಿಸಬೇಕು. ದೇಶದಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ದೇಶದಲ್ಲಿ ಹಿಂದುತ್ವದ ರಕ್ಷಣೆಯನ್ನು ಕೇವಲ ಶಿವಸೇನೆ ಮಾತ್ರವೇ ಮಾಡುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿ ಮೇಲಿನ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯಗಳಿವೆ, ಆದರೆ ಉತ್ತಮವಾದದ್ದನ್ನು ಕೊಂಡಾಡುತ್ತೇವೆ. ಕೆಟ್ಟದ್ದನ್ನು ಟೀಕಿಸುತ್ತೇವೆ. ಭಿನ್ನಾಭಿಪ್ರಾಯಗಳಿದ್ದರೆ ಮೈತ್ರಿಯನ್ನು ಮುರಿಯುವುದಿಲ್ಲವೇಕೆಂದು ಜನರು ಕೇಳುತ್ತಾರೆ. ನಾವು ಸರ್ಕಾರದೊಂದಿಗೆ ಕೈ ಜೋಡಿಸಿದ್ದೇವೆ. ನಮಗೆ ಕೆಲವು ಕಾರ್ಯಗಳನ್ನು ಮಾಡಲಿಕ್ಕಿದೆ. ನಮಗೆ ಅಧಿಕಾರವನ್ನು ಯಾವರೀತಿಯಲ್ಲಿ ಬಳಸಬೇಕೆಂದು ತಿಳಿದಿದೆ ಎಂದು ಹೇಳಿದ್ದಾರೆ.

ಬಿಜೆಪಿ ಪಾಕಿಸ್ತಾನದ ಪರವಾಗಿ ಮೃದು ಧೊರಣೆ ತಳೆದಿದೆ. ಬಿಜೆಪಿ ಗೆ ಧೈರ್ಯವಿದ್ದರೆ ಪಾಕಿಸ್ತಾನದ ನೆಲದೊಳಕ್ಕೆ ಕಾಲಿರಿಸಿ ಭಯೋತ್ಪಾದಕರನ್ನು ಕೊಂದು ತೋರಿಸಲಿ. ಬಿಜೆಪಿಯು ಮುಫ್ತಿ ಮುಹಮ್ಮದ್ ರೊಂದಿಗೆ ಮೈತ್ರಿ ಮಾಡಿಕೊಂಡು ತನ್ನ ತತ್ವಗಳಲ್ಲಿ ಬದಲಾವಣೆ ಮಾಡಿಕೊಂಡಿರಬಹುದು ಆದರೆ ಶಿವಸೇನೆ “ನೆರೆ ರಾಷ್ಟ್ರದ” ಕುರಿತಾದ ತನ್ನ ನಿಲುವನ್ನು ಯಾವುದೇ ಕಾರಣಕ್ಕೂ ಬದಲಾಯಿಸದು. ಮುಫ್ತಿ ಮುಹಮ್ಮದರ ನೆಲದಲ್ಲಿ ಪಾಕಿಸ್ತಾನದ ಧ್ವಜ ಹಾರಾಡಿಸಲಾಗುತ್ತದೆ, ಅದನ್ನು ಸಹಿಸಿಕೊಳ್ಳುವ ಬಿಜೆಪಿ, ನಮ್ಮನ್ನೂ ಸಹಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

Write A Comment