ನವದೆಹಲಿ: ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಮೊಬೈಲ್ ಫೋನುಗಳೇ ಕಾರಣ ಎಂದು ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಹೇಳಿದ್ದಾರೆ.
ಮೊಬೈಲ್ ಫೋನುಗಳಲ್ಲಿ ಅಶ್ಲೀಲ ಚಿತ್ರಗಳು ದೊರೆಯುವುದರಿಂದ ಸಣ್ಣಪುಟ್ಟ ಮಕ್ಕಳನ್ನು ಬಿಡದ ಕಾಮುಕರು ಅತ್ಯಾಚಾರ ನಡೆಸುತ್ತಿದ್ದಾರೆ. ಇದರಿಂದ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಅಜಂ ಖಾನ್ ಹೇಳಿದ್ದು ಇದೀಗ ವಿವಾದಕ್ಕೆ ಗುರಿಯಾಗಿದೆ.
ಎರಡುವರೆ ವರ್ಷದ ಮಕ್ಕಳೆಲ್ಲಾ ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ ಯಾಕೆ? ಯಾಕೆಂದರೆ, ಮೊಬೈಲ್ ಫೋನ್ ಗಳಲ್ಲಿ ಸಿಗುತ್ತಿರುವ ಅಶ್ಲೀಲ ಮೂವಿಗಳು. ಗ್ರಾಮಗಳಲ್ಲೂ ಸಹ ಇಂತಹ ಮೂವಿಗಳನ್ನು ಸುಲಭವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಅಜಂ ಖಾನ್ ಹೇಳಿದ್ದಾರೆ.
ಕಳೆದವಾರ ದೆಹಲಿಯ ನಂಗೋಲಿಯಲ್ಲಿ 2.5 ವರ್ಷದ ಮಗುವೊಂದು ಅತ್ಯಾಚಾರಕ್ಕೊಳಗಾದ ಹಿನ್ನೆಲೆಯಲ್ಲಿ ಅಝಂಖಾನ್ ಈ ಹೇಳಿಕೆ ನೀಡಿದ್ದಾರೆ.