ಮಾಸ್ಕೋ: ರಷ್ಯಾದ ಮತ್ತು ವಿಶ್ವದ 154ನೇ ಅತ್ಯಂತ ಶ್ರೀಮಂತ ವ್ಯಕ್ತಿ ಡಿಮಿಟ್ರಿ ರೈಬೊಲೊವ್ಲೆವ್ ಮತ್ತು ಆತನ ಪತ್ನಿ ಎಲೆನಾ ರೈಬೊಲೊವ್ಲೆವ್ ರ ವಿಚ್ಛೇದನವನ್ನು ವಿಶ್ವದ ಅತ್ಯಂತ ದುಬಾರಿ ವಿಚ್ಛೇದನ ಎಂದು ಘೋಷಿಸಲಾಗಿದೆ. ಡಿಮಿಟ್ರಿ ಮತ್ತು ಎಲೆನಾ ತಮ್ಮ ವಿಚ್ಛೇದನವನ್ನು ಘೋಷಿಸಿದ್ದಾರೆ.
2014ರ ಮೇ ತಿಂಗಳಿನಲ್ಲಿ ಸ್ವಿಸ್ ಕೋರ್ಟ್ ಎಲೆನಾರಿಗೆ 26,880 ಕೋಟಿ ರೂ. ಪರಿಹಾರ ಧನ, ಅಂದರೆ ಡಿಮಿಟ್ರಿಯ ಸಂಪೂರ್ಣ ಅರ್ಧ ಆಸ್ತಿ ನೀಡಬೇಕೆಂದು ತೀರ್ಪಿತ್ತಿತ್ತು. ಇದನ್ನು ಪ್ರಶ್ನಿಸಿ ಎಲೆನಾ ಜಿನೆವಾ ಕೋರ್ಟ್‌ನ ಮೆಟ್ಟಿಲೇರಿದ್ದರು.
ಈಗ ಕೋರ್ಟ್ ಹೊರಗೆ ವಿಚ್ಛೇದನ ಇತ್ಯರ್ಥಕ್ಕೆ ಉಭಯತ್ರರು ತೀರ್ಮಾನಿಸಿದ್ದಾರೆ. ಫ್ರೆಂಚ್ ಫುಟ್‌ಬಾಲ್ ಕ್ಲಬ್‌ನ ಮಾಲೀಕನೂ ಮತ್ತು 2 ರಿಯಲ್ ಎಸ್ಟೇಟ್‌ಗಳ ಮಾಲೀಕನೂ ಆಗಿರುವ ಆತ ಇನ್ನೂ ಹೆಚ್ಚಿನ ಪರಿಹಾರ ನೀಡಬೇಕೆಂದು ಎಲೆನಾ ಕೇಳಿದ್ದರು.
ಕಾಲೇಜು ದಿನಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದ ಇವರಿಬ್ಬರೂ 23 ವರ್ಷ ಒಟ್ಟಿಗೆ ಸಂಸಾರ ಮಾಡಿದ್ದರು. ಅವರಿಗೆ ಇಬ್ಬರು ಮಕ್ಕಳೂ ಕೂಡ ಇದ್ದಾರೆ. ಆದರೆ ಹಲವು ಕಾರಣಗಳನ್ನೊಡ್ಡಿ ಎಲೆನಾ 2008ರ ಹೊಸ ವರ್ಷದಲ್ಲಿ ತನ್ನ ಪತಿಯಿಂದ ವಿಚ್ಛೇದನ ಸಿಗಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದರು.