ಮುಂಬೈ

ಮಾನವೀಯತೆ ಮರೆತ ಮುಂಬೈ ಮಹಿಳಾ ಪೊಲೀಸರಿಂದ ಯುವತಿ ಮೇಲೆ ಹಲ್ಲೆ

Pinterest LinkedIn Tumblr

policeಮುಂಬೈ: ಮುಂಬೈನ ಪ್ರಸಿದ್ಧ ಲಾಲ್ ಬಾಗ್ ಚಾ ರಾಜಾ ಗಣಪತಿ ಪೆಂಡಾಲ್ ನೊಳಗೆ ನುಗ್ಗಲು ಯತ್ನಿಸಿದ ಯುವತಿಯೊಬ್ಬಳನ್ನು ಮುಂಬೈ ಮಹಿಳಾ ಪೊಲೀಸರು ಹಿಗ್ಗಾಮುಗ್ಗ ಥಳಿಸಿ ಅಮಾನವೀಯತೆ ಮೆರೆದಿದ್ದಾರೆ.

ಸಾರ್ವಜನಿಕ ಪ್ರವೇಶದ್ವಾರದಲ್ಲಿ ಹೆಚ್ಚು ಜನದಟ್ಟನೆ ಇದ್ದಿದ್ದರಿಂದ ಯುವತಿಯೊಬ್ಬಳು ಪಾಸ್ ಇಲ್ಲದೆ ವಿಐಪಿ ಪ್ರವೇಶ ದ್ವಾರದ ಮೂಲಕ ಒಳ ನುಗ್ಗಲು ಯತ್ನಿಸಿದ್ದಾಳೆ. ಈ ವೇಳೆ ಕೆರಳಿದ 5 ರಿಂದ 6 ಮಹಿಳಾ ಪೊಲೀಸರು ಯುವತಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದವರು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಈ ವಿಡಿಯೋ ನೋಡಿದ ಮುಂಬೈ ಮಂದಿ ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಘಟನೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ತನಿಖೆಗೆ ಆದೇಶಿಸಿದ್ದಾರೆ.

Write A Comment