ಮುಂಬೈ

ರೈಲಿನ ಲೇಡೀಸ್ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ !

Pinterest LinkedIn Tumblr

rape

ಮುಂಬಯಿ: ರೈಲಿನಲ್ಲಿರುವ ಲೇಡೀಸ್ ಕಂಪಾರ್ಟ್‌ಮೆಂಟ್‌ನಲ್ಲೂ ಪ್ರಯಾಣಿಸುವುದೂ ಸೇಫ್ ಅಲ್ಲ ಎಂಬುದು ಮುಂಬಯಿಯಲ್ಲಿ ನಡೆದಿರುವ ಅತ್ಯಾಚಾರ ಯತ್ನ ಪ್ರಕರಣದಿಂದ ದೃಢಪಟ್ಟಿದೆ.

ಮುಂಬಯಿನ ಮಾಲ್ಡಾದಿಂದ ಹೊರಟ ರೈಲಿನ ಲೇಡೀಸ್ ಕಂಪಾರ್ಟ್‌ಮೆಂಟ್‌ನಲ್ಲಿದ್ದ ಎಂಬಿಎ ಪದವೀದರೆಯೊಬ್ಬಳ ಮೇಲೆ ಅಪರಿಚಿತ ವ್ಯಕ್ತಿ ಅತ್ಯಾಚಾರಕ್ಕೆ ಯತ್ನಿಸಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಮುಂಬಯಿ ಹೊರವಲಯದಲ್ಲಿರುವ ಮಾಲ್ಡಾದಿಂದ ಗುರುವಾರ ರಾತ್ರಿ 11ಗಂಟೆಗೆ ಪ್ರಯಾಣ ಬೆಳೆಸಿದ ಈ ಯುವತಿಯು ಮಹಿಳೆಯರ ಬೋಗಿಯಲ್ಲಿ ಏಕಾಂಗಿಯಾಗಿದ್ದನ್ನು ಗಮನಿಸಿದ ಅಪರಿಚಿತ ವ್ಯಕ್ತಿಯೊಬ್ಬ ಕಾಂಪಾರ್ಟ್‌ಮೆಂಟ್‌ವೊಳಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಯುವತಿ ಕೂಗಿದ್ದರಿಂದ ಹೆದರಿಕೊಂಡ ವ್ಯಕ್ತಿ ರೈಲಿನಿಂದ ಜಿಗಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment